Tuesday, 21 March 2017

ಇದುವೇ ಸತ್ಯ

🌸 ಗೆಜ್ಜೆಯ ಬೆಲೆ ಸಾವಿರ ಸಾವಿರ
ಹಾಕುವದು ಕಾಲಿನಲ್ಲಿ ...

ಕುಂಕುಮದ ಬೆಲೆ ಪೈಸೆಯಲ್ಲಿ
ಆದರೆ ಹಚ್ಚುವದು ಹಣೆಯಲ್ಲಿ ...

🌸💰 ಬೆಲೆ ಮುಖ್ಯವಲ್ಲ ..
    🔴ಇಲ್ಲಿ ಕೃತಿ ಮುಖ್ಯ ...

🌸 ಗೀತಾ ಮತ್ತು ಖುರಾನ್ ಒಂದೇ ಮನೆಯಲ್ಲಿ ಇದ್ದರೂ
ಎಂದು ಜಗಳ ಕಾಯುವುದಿಲ್ಲ...

ಇದರ ಬಗ್ಗೆ ಜಗಳಾಡುವವರು
ಎಂದೂ ಇವುಗಳನ್ನು ಓದಿಲ್ಲ ..

🌸 ಉಪ್ಪಿನಂತೆ ಕಟುಮಾತನು
ಹೆಳುವವನು ನಿಜ ಸ್ನೇಹಿತ ...

ಸಕ್ಕರೆಯಂತೆ ಸಿಹಿ ಮಾತಾಡುವ
ನಯ ವಂಚಕ....

🌸 ಅದಕ್ಕೆ ಉಪ್ಪಿನಲ್ಲಿ ಹುಳುಬಿದ್ದ ಇತಿಹಾಸವಿಲ್ಲ ....

ಇತಿಹಾಸದಲ್ಲಿ ಹುಳು ಬೀಳದ ಸಿಹಿಯಿಲ್ಲ...

🌸 ಈ..ಮಂದಿರ - ಮಸೀದಿಗಳು
ಬಹಳ ವಿಸ್ಮಯ ....

ಇಲ್ಲಿ ಭಿಕ್ಷುಕ ಹೊರಗೆ ಭಿಕ್ಷೆ ಬೇಡುತ್ತಾನೆ...

ಶ್ರೀಮಂತಾ ಒಳಗೆ ಭಿಕ್ಷೆ ಬೆಡುತ್ತಾನೆ....

🌸 ಕಾಣದ ದೇವರಿಗೆ ಹಾಲು ಖರ್ಜೂರ  ನೈವೇದ್ಯ ....

ಹಸಿದ ಬಡವನಿಗೆ ಒಣ ರೊಟ್ಟಿ ಹಳಸಿದ ಅನ್ನಾ ಇದು ಎಂತಾ ವಿದ್ಯಾ....

🌸 ಏ ಮಾನವಾ ಈ ಜೀವನವು ಅಷ್ಟೊಂದು  ಒಳ್ಳೆಯದೇನಲ್ಲ ....

ಒಳ್ಳೆಯದೇ ಆಗಿದ್ದರೆ ಈ ಮನುಷ್ಯ
ಅಳುತ್ತಾ ಈ ಜೀವನಕ್ಕೆ ಬರುತ್ತಿರಲಿಲ್ಲ ...

ಮತ್ತು ಹೊಗುವಾಗ ಎಲ್ಲರನು ಅಳಿಸಿ ಹೋಗುತ್ತಿರಲಿಲ್ಲ....

🌸 ಬಾ ಎಂದರೂ ಸನ್ಮಾರ್ಗದಲ್ಲಿ ಯಾರು ಬರುವುದಿಲ್ಲ...

ಕರೆಯದಿದ್ದರೂ ಕೆಟ್ಟ ಮಾರ್ಗದಲ್ಲಿ ಎಲ್ಲರೂ ಬರುತ್ತಾರೆ....

ಅದಕ್ಕೇ...

🌸 ಸಾರಾಯೀ ಮಾರುವವ ಕುಳಿತಲ್ಲೀಯೇ ಎಲ್ಲರೂ.... ಹೂಕ್ತಾರೇ ...

ಆದರೆ ಹಾಲು ಮಾರುವವ ಅವನೇ ಎಲ್ಲರ ಬೀದಿ ಬೀದಿ ಮನೆ ಮನೆಗೆ ಬರುತ್ತಾನೆ....

🌸 ಹಾಲು ಮಾರುವನಿಗೆ ಕೇಳುತ್ತಾರೆ ಹಾಲಿನಲ್ಲಿ ನೀರು ಬೆರೆಸಿದಿಯಾ ಅಂತಾ.....

ದುಪ್ಪಟ್ಟು ಹಣ ಕೊಟ್ಟ ಕೊಂಡ ಸಾರಾಯಿಗೆ ತಾವೇ ಕೈಯಾರ ನೀರು ಬೆರಸಿ ಕುಡಿತಾರೆ..
ವಾರೆ ದುನಿಯಾ....ವಾ

🌸 ಮದುವೆ ಮೆರವಣಿಗೆಯಲ್ಲಿ ಮದುಮಗ ಹಿಂದೆ ದುನಿಯಾ ಮುಂದೆ...

ಶವ ಯಾತ್ರೆಯಲ್ಲಿ ಹೆಣ ಮುಂದೆ
ದುನಿಯಾ ಹಿಂದೆ ಹಿಂದೆ....

🌸 ಹೆಣವನ್ನು ಮಟ್ಟಿದರೆ ಸ್ನಾನ
ಮಾಡ್ತಾರೆ ....

ಮೂಖ ಪ್ರಾಣಿಯ ಕೊಂದು ಅದರ ಹೆಣವನ್ನು ತಿಂತಾರೆ ...

🌸 ಮೊಂಬತ್ತಿ ಹಚ್ಚಿ ಸತ್ತವರನು
ನೆನೆಯುತ್ತಾರೆ ....

ಮೊಂಬತ್ತಿಯ ಆರಿಸಿ ಜನ್ಮ ದಿನ
ಆಚರಣೆಮಾಡ್ತಾರೆ....

🌸 ಯಾವುದು ನಿನ್ನ ಭಾಗ್ಯದಲ್ಲಿ
ಇದೆಯೊ ಅದು ನಿನಗೆ ದೊರತೇ ದೊರೆಯುತ್ತದೆ ...

ಯಾವುದು ನಿನ್ನ ಭಾಗ್ಯದಲ್ಲಿ ಇಲ್ಲವೋ ಅದು ದೊರೆತರೂ ಹೊರಟು ಹೋಗುತ್ತದೆ ....

ಇದುವೇ ಸತ್ಯ

No comments:

Post a Comment