Thursday, 19 April 2018

ಅಧ್ಯಾಯ – 01 : ಶ್ಲೋಕ – 42



ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ     ।

ಪತಂತಿ  ಪಿತರೋ ಹ್ಯೇಷಾಂ ಲುಪ್ತಪಿಂಡೋದಕಕ್ರಿಯಾಃ     ॥೪೨॥

ಸಂಕರಃ ನರಕಾಯ ಏವ  ಕುಲಘ್ನಾನಾಮ್  ಕುಲಸ್ಯ ಚ
ಪತಂತಿ  ಪಿತರಃ ಹಿ ಏಷಾಮ್  ಲುಪ್ತ ಪಿಂಡ ಉದಕ ಕ್ರಿಯಾಃ -ಬಣ್ಣಗೇಡು ಕುಲಗೇಡಿಗಳನ್ನೂ, ಕುಲವನ್ನೂ ನರಕಕ್ಕೆ ತಳ್ಳುತ್ತದೆ. ಇಂಥವರ ಪೂರ್ವಜರು ಪಿಂಡ-ತರ್ಪಣಗಳಿಲ್ಲದೆ ನರಳುತ್ತಾರೆ.

ವಿಕ್ಷಿಪ್ತ ಮನಸ್ಸಿನ ಮಕ್ಕಳು ಹುಟ್ಟುವುದರಿಂದ, ಇಡೀ ಸಮಾಜ ನರಕಕ್ಕೆ ಹೋಗಬೇಕಾಗುತ್ತದೆ. ಹಾಗು ಅದಕ್ಕೆ ಕಾರಣರಾದ ನಾವೂ ಕೂಡಾ ನರಕಕ್ಕೆ ಹೋಗಬೇಕಾಗುತ್ತದೆ. ಸಮಾಜ ಈ ರೀತಿ ಸಂಕೀರ್ಣವಾದಾಗ, ಎಲ್ಲಾ ನಂಬಿಕಯನ್ನು ಕಳೆದುಕೊಂಡಾಗ, ಪಿತೃಗಳು ಪಿಂಡ ಇಲ್ಲದೆ ನರಕದಲ್ಲಿ ಬೀಳುತ್ತಾರೆ ಎನ್ನುವುದು ಅರ್ಜುನನ ಯುದ್ಧೋತ್ತರ ಪರಿಣಾಮದ ಭೀಕರತೆಯ ಪರಿಕಲ್ಪನೆ.

ಇಲ್ಲಿ ಪಿಂಡ ಅಂದರೆ ಏನು? ಅದರ ಮಹತ್ವ ಏನು? ಅದು ಯಾರಿಗೆ ಹೋಗಿ ಹೇಗೆ ಸೇರುತ್ತದೆ ಎನ್ನುವುದನ್ನು ನಾವು ಅರ್ಥ  ಮಾಡಿಕೊಳ್ಳೋಣ.  ನಾವು ಹಾಕುವ ಸ್ಥೂಲವಾದ ಪಿಂಡ ಸತ್ತ ಜೀವಕ್ಕೆ ನೇರವಾಗಿ ಹೋಗಿ ಸೇರುವುದಿಲ್ಲ. ಸತ್ತ ನಂತರ ಸ್ಥೂಲ ಜೀವದಲ್ಲಿ ಇರುವ ಜೀವಕ್ಕೆ ಸ್ಥೂಲವಾದ ಪಿಂಡ ಬೇಕಿಲ್ಲ. ಜೀವ ತನ್ನ ಕರ್ಮಾನುಸಾರ ತಾನು ಹೋಗಬೇಕಾದಲ್ಲಿಗೆ ಹೋಗುತ್ತದೆ. ನಾವು ಪಿಂಡ ಹಾಕುವುದು ಪಿತೃದೇವತೆಗಳಿಗೆ. ಇದೊಂದು ದೇವತಾಗಣ. ಅದರಲ್ಲಿ ಒಟ್ಟು ನೂರು ದೇವತೆಗಳು. ಅವರಲ್ಲಿ  ಮೂರು ಪ್ರಧಾನ`ಪಿತೃಗಳು .

ಜೀವಿತ ಕಾಲದಲ್ಲಿ ತತ್ವಾಭಿಮಾನಿ ದೇವತೆಗಳನ್ನು ಹೇಗೆ  ಪೂಜಿಸುತ್ತೆವೋ ಹಾಗೆ ಸತ್ತ ನಂತರ, ಈ ಸ್ಥೂಲಶರೀರದಿಂದ ಈಚೆ ಬಂದ ಮೇಲೆ, ಜೀವವನ್ನು ರಕ್ಷಿಸುವ ದೇವತಾಗಣ-ಪಿತೃಗಣ. ಈ ಪಿತೃಗಳನ್ನು ನಿಯಂತ್ರಿಸುವವರು ವಸು-ರುದ್ರ-ಆದಿತ್ಯರು. ಈ ಪಿತೃ ದೇವತೆಗಳನ್ನು ನಮ್ಮ ಪೂರ್ವಜರು ತೀರಿಕೊಂಡ ದಿನದಂದು ಆರಾಧಿಸುವುದು ಸಂಪ್ರದಾಯ. ಇಲ್ಲಿ ಪಿತೃಗಳಿಗೆ ಪಿಂಡ ಪ್ರಧಾನ ಮಾಡುವ ಕಾರಣ ಏನೆಂದರೆ, ಒಂದು ವೇಳೆ ಕಾರಣ ವಿಶೇಷದಿಂದ ನಮ್ಮ ಹಿರಿಯರಿಗೆ ಅವರ ದಾರಿಯಲ್ಲಿ  ಬಾಧಕವಾಗಿದ್ದರೆ, ಅದನ್ನು ಪರಿಹರಿಸಿ ಎನ್ನುವ ಪ್ರಾರ್ಥನೆಯೇ ಪಿಂಡ ಪ್ರಧಾನ. “ಪ್ರಾರಾಬ್ದ ಕರ್ಮದಿಂದ ಅವರನ್ನು ಕಾಪಾಡಿ” ಎನ್ನುವ ಪಿತೃ-ದೇವತೆಗಳ ಪೂಜೆ. ಇನ್ನು ಕಾಗೆ ಮುಟ್ಟುವುದು ಎಂದರೆ ಪಿತೃ ದೇವತೆಗಳು ನಮ್ಮ ಪೂಜೆಯನ್ನು ಸ್ವೀಕರಿಸಿದ ಶಕುನ ಸಂಕೇತ.
ಕೃಪೆ ; ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯರು

ಅಧ್ಯಾಯ – 01 : ಶ್ಲೋಕ – 43



ದೋಷೈರೇತೈಃ ಕುಲಘ್ನಾನಾಂ ವರ್ಣಸಂಕರಕಾರಕೈಃ    ।

ಉತ್ಸಾದ್ಯನ್ತೇ ಜಾತಿಧರ್ಮಾಃ ಕುಲಧರ್ಮಾಶ್ಚ ಶಾಶ್ವತಾಃ   ॥೪೩॥

ದೋಷೈ ಏತೈಃ ಕುಲಘ್ನಾನಾಮ್  ವರ್ಣಸಂಕರ ಕಾರಕೈಃ   
ಉತ್ಸಾದ್ಯನ್ತೇ ಜಾತಿಧರ್ಮಾಃ ಕುಲಧರ್ಮಾಃ ಚ  ಶಾಶ್ವತಾಃ -ಸಮಾಜದ  ಬಣ್ಣಗೇಡಿಗೆ ಕಾರಣರಾದ ಕುಲಗೇಡಿಗಳ ಇಂಥ ತಪ್ಪುಗಳಿಂದ ಸಹಜ ಧರ್ಮಗಳು ಮತ್ತು ಅಳಿವಿರದ ಕುಲಧರ್ಮಗಳು ನೆಲೆಗೆಡುತ್ತವೆ.

ಯುದ್ಧದಿಂದ ಸಮಾಜದ ಮೇಲೆ ಆಗುವ ನೇರ ಪರಿಣಾಮ ಎಂದರೆ, ನಾಯಕರಿಲ್ಲದ, ಯುವಕರಿಲ್ಲದ ಸಮಾಜ.  ಗಂಡು-ಹೆಣ್ಣಿನ ಅನುಪಾತ ವೆತ್ಯಾಸ. ಇದು ಸರಿ ಹೊಂದಬೇಕಾದರೆ ಅದೆಷ್ಟು ವರ್ಷಗಳು ಬೇಕು? ನಾವು ಮಹಾಭಾರತ ಯುದ್ಧವನ್ನು ನೋಡಿದರೆ ಅಲ್ಲಿ ಕನಿಷ್ಠ ಐವತ್ತು ಲಕ್ಷ ಮಂದಿ ಜನ ಸತ್ತಿದ್ದಾರೆ. ಇಂತಹ ಮಹಾಯುದ್ಧದಿಂದ ಇಡೀ ಸಮಾಜ ನಾಶಮಾಡಿದ ಕುಲಕಂಟಕರು ನಾವಾಗುತ್ತೇವೆ ಎನ್ನುವುದು ಅರ್ಜುನನ ಕಳಕಳಿ. “ಸಮಾಜದ ವ್ಯವಸ್ಥೆ  ನಾಶವಾಗುವುದರಿಂದ ಸ್ವಭಾವ ನಾಶವಾಗುತ್ತದೆ. ಇದರಿಂದ ಆಯಾ ಜೀವದ ಸ್ವಭಾವದ ಅಭಿವೃದ್ಧಿ ಆಗದೆ, ವ್ಯಕ್ತಿತ್ವ ವಿಕಸನ ನಾಶವಾಗುತ್ತದೆ. ಶಾಶ್ವತ ಮೌಲ್ಯದ ಸಮಾಜಧರ್ಮ ನಾಶವಾಗುತ್ತದೆ. ಅನಾದಿ ಕಾಲದಿಂದ ಸಮಾಜ ಒಪ್ಪಿಕೊಂಡು ಬಂದ ಸ್ಥಿರಧರ್ಮ ಕೊಚ್ಚಿಕೊಂಡು ಹೋಗುತ್ತದೆ” ಎಂದು ಅರ್ಜುನ ಕೃಷ್ಣನ ಮುಂದೆ ತನ್ನ ವಾದವನ್ನು ಮಂಡಿಸುತ್ತಾನೆ.
ಕೃಪೆ ; ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯರು

ಅಧ್ಯಾಯ - 04 : ಶ್ಲೋಕ – 22



ಯದೃಚ್ಛಾಲಾಭಸಂತುಷ್ಟೋ ದ್ವಂದ್ವಾತೀತೋ ವಿಮತ್ಸರಃ ।ಸಮಃ ಸಿದ್ಧಾವಸಿದ್ಧೌ ಚ ಕೃತ್ವಾSಪಿ ನ ನಿಬದ್ಧ್ಯತೇ ॥೨೨॥

ಯದೃಚ್ಛಾ ಲಾಭ ಸಂತುಷ್ಟಃ  ದ್ವಂದ್ವ ಅತೀತಃ ವಿಮತ್ಸರಃ |
ಸಮಃ ಸಿದ್ಧೌ ಅಸಿದ್ಧೌ ಚ ಕೃತ್ವಾ ಅಪಿ ನ ನಿಬಧ್ಯತೇ --

ತಾನಾಗಿಯೇ ಸಿಕ್ಕಿದ್ದರಲ್ಲಿ ಸಂತಸಪಡುವವನು, ಬದುಕಿನಇಬ್ಬಂದಿತನವನ್ನು ಮೀರಿನಿಂತವನು, ಹೆರವರ ಏಳಿಗೆಗೆ ಕಿಚ್ಚುಪಡದವನು,ಗಳಿಕೆಯನ್ನೂ ಕಲಿಕೆಯನ್ನೂ ಒಂದೇ ಬಗೆಯಿಂದಕಾಣುವವನು ಕರ್ಮ ಮಾಡಿದರೂ ಅದರ ಸೆರೆಗೆ ಸಿಕ್ಕುವುದಿಲ್ಲ.

ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿ ಬಂದಾಗ ಕಾಣುವ ಮುಖ್ಯ ಲಕ್ಷಣದ ಬಗ್ಗೆ ಇಲ್ಲಿ ವಿವರಣೆ ಇದೆ.  ತೃಪ್ತಿಯನ್ನುಸಾಧಿಸಿದವನಿಗೆ ಏನಾದರೂ ಸಿಕ್ಕಿದರೆ ಅದರಲ್ಲೇ ಸಂತೋಷವಾಗಿರುತ್ತಾನೆ. ಸಿಕ್ಕಿದ್ದು ಸಾಲದೆಂದಾಗಲಿ, ಇನ್ನೇನೋ ಸಿಗಲಿಎಂದಾಗಲಿ ಆತನ ಮನಸ್ಸು ಬಯಸುವುದಿಲ್ಲ. ಏಕೆಂದರೆ ನಮಗೆ ಏನೇ ಸಿಕ್ಕಿದರೂ ಅದು ಭಗವಂತನ ಇಚ್ಛೆಯಿಂದಸಿಕ್ಕಿರುವುದು. ಉದಾಹರಣೆಗೆ ಉದ್ಯೋಗ. ಪ್ರತಿಭೆ ಇದ್ದವರಿಗೆಲ್ಲಾ ಉದ್ಯೋಗ ಸಿಗುವುದಿಲ್ಲ. ಉದ್ಯೋಗಸಿಗುವುದು, ಅದರಿಂದ ಸಂಬಳ ಸಿಗುವುದು- ಎಲ್ಲವೂ ಭಗವಂತನ ಇಚ್ಛೆಯಂತೆ. ಆದ್ದರಿಂದ ಎಲ್ಲವೂ ಭಗವಂತನ ಸಂಕಲ್ಪಎಂದು ತಿಳಿದು ನಿಸ್ವಾರ್ಥ ಕರ್ಮದಲ್ಲಿ ತೊಡಗಿದಾಗ ಮನಸ್ಸು ನಿರ್ಮಲವಾಗುತ್ತದೆ. ಈ ಸ್ಥಿತಿಯಲ್ಲಿ ಅಹಂಕಾರ ಎಂದೂ ಹತ್ತಿರಸುಳಿಯುವುದಿಲ್ಲ. ಬಡತನವಾಗಲಿ,ಸಿರಿತನವಾಗಲಿ, ನಾವು ಹುಟ್ಟುವ ಮನೆಯಾಗಲಿ, ಯಾವುದೂ ನಮ್ಮ ಕೈಯಲ್ಲಿಲ್ಲ. ಎಲ್ಲವೂ ಆ ಈಶ್ವರ ಇಚ್ಛೆ. ಇದನ್ನು  ತಿಳಿದು ಬದುಕುವುದು ಯತಚಿತ್ತಾತ್ಮನ ಗುರುತು.

ಇನ್ನು ಎರಡನೆ ಲಕ್ಷಣ 'ದ್ವಂದ್ವಾತೀತ ಜೀವನ'. ನಮ್ಮ ಜೀವನ ಎಂದರೆ ದ್ವಂದ್ವ. ಹಗಲು-ರಾತ್ರಿ, ಲಾಭ-ನಷ್ಟ, ಸೋಲು-ಗೆಲುವು, ಹುಟ್ಟು-ಸಾವು ಹೀಗೆ ಎಲ್ಲವೂ ದ್ವಂದ್ವ. ನಾವು ಈ ದ್ವಂದ್ವದ ನಡುವೆಯೇ ಬದುಕಬೇಕು. ಹಗಲು-ರಾತ್ರಿಗೆ ನಾವುಹೇಗೆ ಹೊಂದಿಕೊಂಡು ಬದುಕುತ್ತೇವೆ ಹಾಗೆ 'ಇತರ ದ್ವಂದ್ವದ ಆಘಾತಕ್ಕೆ ಒಳಗಾಗದೆ ಬದುಕಲು ಕಲಿ'  ಎನ್ನುತ್ತಾನೆ ಕೃಷ್ಣ. ಸಿಗದಿದ್ದಾಗ ದುಃಖವಿಲ್ಲ, ಸಿಕ್ಕಾಗ ಹಾರಾಟವಿಲ್ಲ. ಎರಡೂ ಸ್ಥಿತಿಯಲ್ಲಿ ಏಕರೂಪವಾದ ಮನಃಸ್ಥಿತಿಯನ್ನು ಗಳಿಸುವುದುದ್ವಂದ್ವಾತೀತ ಜೀವನ.

ದ್ವಂದ್ವಾತೀತನಾಗಿ ಬದುಕುವಾಗ ಒಂದು  ಸಮಸ್ಯೆ ಎದುರಾಗುತ್ತದೆ. ಇದ್ದದ್ದು ಸಾಕು ಎಂದು ಬದುಕುತ್ತಿರುವಾಗ ನಮ್ಮಜೊತೆಗಿನ ಇನ್ನೊಬ್ಬ ಹೆಚ್ಚು ಗಳಿಸಲಾರಂಬಿಸಿದರೆ, ಅದನ್ನು ನೋಡಿ ನಮಗೆ ಕಿಚ್ಚು ಹುಟ್ಟಿಕೊಳ್ಳುತ್ತದೆ. ನಮ್ಮ ಕೆಳಗಿನಮಟ್ಟದವರು, ನಮ್ಮ ಪಕ್ಕದ ಮನೆಯವರು  ಯಾವುದೋ ಕಾರಣಕ್ಕೆ ಶ್ರೀಮಂತರಾದರೆ ನಮಗೆ ಸಂಕಟ! ಇಲ್ಲಿ ಕೃಷ್ಣಹೇಳುತ್ತಾನೆ "ಇನ್ನೊಬ್ಬರನ್ನು ಕಂಡು ಎಂದೂ ಕಿಚ್ಚು ಪಡಬೇಡ" ಎಂದು. ಯಾರ್ಯಾರಿಗೆ ಎಷ್ಟೆಷ್ಟು ಸಿಗಬೇಕೋ ಅಷ್ಟಷ್ಟೇಸಿಗುವುದು. ನಾವು ಎಷ್ಟು ಕೌಶಲ್ಯ(expertise)ರಾದರೂ ಕೂಡಾ ಭಗವಂತ ಅನುಗ್ರಹಿಸದೇ ಇದ್ದರೆ ನಾವು ಮೇಲಕ್ಕೇಳಲುಸಾಧ್ಯವಿಲ್ಲ. ಈ ಎಚ್ಚರವೇ  "ಯದೃಚ್ಛಾ ಲಾಭ ಸಂತುಷ್ಟಃ"

ಇನ್ನು ಸಿದ್ಧಿ ಅಸಿದ್ಧಿಗಳು. ಉದಾಹರಣೆಗೆ ಧ್ಯಾನ(Meditation): ಧ್ಯಾನದಲ್ಲಿ ಏಕಾಗ್ರತೆ ಪಡೆಯಲು ಆಗದೆ ಇನ್ನೇನೋಕಾಣಿಸಿದರೆ ಏನು ಕಾಣಿಸಿತೋ ಅದರಲ್ಲೇ ಭಗವಂತನನ್ನು ಕಾಣು. ಅದಕ್ಕಾಗಿ ತಲೆ ಕೆಡಿಸಿಕೊಳ್ಳಬೇಡ. ಏಕಾಗ್ರತೆಸಾಧ್ಯವಾದರೆ ಭ್ರಮೆಗೊಳಗಾಗಬೇಡ. ಏಕೆಂದರೆ ಸಿದ್ಧಿ-ಅಸಿದ್ಧಿಗಳು ನಮ್ಮ ಕೈಯಲ್ಲಿಲ್ಲ. ಅಸಿದ್ಧಿಯೂ ಸಿದ್ಧಿಯ ಮೆಟ್ಟಿಲು. ಇಂತಹ ಮಾನಸಿಕ ಸಮತೋಲನ ಲೌಕಿಕ ಮತ್ತು ಅಧ್ಯಾತ್ಮಿಕ ಜೀವನದಲ್ಲಿ ಅತಿಮುಖ್ಯ. ಇಂತಹ ಸ್ಥಿತಿಯಲ್ಲಿ ಕರ್ಮ ಎಂದೂಬಂಧಕವಾಗುವುದಿಲ್ಲ. 

ಕೃಪೆ:  ಪದ್ಮಶ್ರೀ  🙏 ಶ್ರೀ ಬನ್ನಂಜೆ ಗೋವಿಂದಾಚಾರ್ಯರು🙏

ಅಧ್ಯಾಯ - 04 : ಶ್ಲೋಕ – 23



ಗತ ಸಂಗಸ್ಯ ಮುಕ್ತಸ್ಯ ಜ್ಞಾನಾವಸ್ಥಿತಚೇತಸಃ ।ಯಜ್ಞಾಯಾSಚರತಃ ಕರ್ಮ ಸಮಗ್ರಂ ಪ್ರವಿಲೀಯತೇ ॥೨೩॥

ಗತ ಸಂಗಸ್ಯ ಮುಕ್ತಸ್ಯ ಜ್ಞಾನ ಅವಸ್ಥಿತ ಚೇತಸಃ |
ಯಜ್ಞಾಯ ಆಚರತಃ ಕರ್ಮ ಸಮಗ್ರಮ್  ಪ್ರವಿಲೀಯತೇ -

ಫಲದ ನಂಟು ತೊರೆದು, ದೇಹಾಭಿಮಾನ ತೊರೆದು, ಭಗವಂತನಅರಿವಿನಲ್ಲೆ ಬಗೆನೆಟ್ಟು, ಪೂಜೆಯೆಂದು ಮಾಡುವವನ ಎಲ್ಲಾ ಕರ್ಮ ಲಯಗೊಳ್ಳುತ್ತದೆ.

ಈ ಶ್ಲೋಕದಲ್ಲಿ ಮೇಲೆ ಹೇಳಿದ ಎಲ್ಲಾ ವಿಷಯವನ್ನು ಉಪಸಂಹಾರ ರೂಪದಲ್ಲಿ ಭಗವಂತ ನಮ್ಮ ಮುಂದಿಟ್ಟಿದ್ದಾನೆ.
ಫಲದ ಬಗ್ಗೆ ಅತಿಯಾದ ಆಸೆ ಇಟ್ಟುಕೊಳ್ಳಬೇಡ; ಅತಿಯಾದ ನಿರೀಕ್ಷೆ ಬೇಡ; ಕರ್ತವ್ಯ ನಿಷ್ಠೆಇರಲಿ; ದೇಹಾಭಿಮಾನ, ಪರಿವಾರದ ಅಭಿಮಾನವನ್ನು ತೊರೆದು ನಿರ್ಲಿಪ್ತನಾಗಿ ಬದುಕಲು ಕಲಿ;ಮನಸ್ಸನ್ನುಜ್ಞಾನಸ್ವರೂಪನಾದ ಭಗವಂತ(ಚೇತಸ್ಸು)ನಲ್ಲಿ ನೆಲೆಗೊಳಿಸು. ಹೀಗೆ ಬದುಕಿದಾಗ ನಾವು ಮಾಡುವ ಕರ್ಮವೆಲ್ಲವೂಯಜ್ಞವಾಗಿ ಯಜ್ಞ ನಾಮಕ ಭಗವಂತನನ್ನು ಸೇರುತ್ತದೆ ಹಾಗು  ಜ್ಞಾನದ ಬೆಂಕಿಯಲ್ಲಿ ಕರ್ಮದ ಕೊಳೆ ಸುಟ್ಟುಹೋಗುತ್ತದೆ.

ಕೃಪೆ:  ಪದ್ಮಶ್ರೀ  🙏 ಶ್ರೀ ಬನ್ನಂಜೆ ಗೋವಿಂದಾಚಾರ್ಯರು🙏

ಅಧ್ಯಾಯ – 01 : ಶ್ಲೋಕ – 44



ಉತ್ಸನ್ನಕುಲಧರ್ಮಾಣಾಂ ಮನುಷ್ಯಾಣಾಂ ಜನಾರ್ದನ  ।

ನರಕೇ ನಿಯತಂ ವಾಸೋ ಭವತೀತ್ಯನುಶುಶ್ರುಮ  ॥೪೪॥

ಉತ್ಸನ್ನ ಕುಲಧರ್ಮಾಣಾಮ್ ಮನುಷ್ಯಾಣಾಮ್  ಜನಾರ್ದನ 
ನರಕೇ ನಿಯತಮ್  ವಾಸಃ ಭವತಿ ಇತಿ ಅನುಶುಶ್ರುಮ- ಓ ಜನಾರ್ಧನ, ಕುಲ ಧರ್ಮದ ನೆಲೆದಪ್ಪಿದವರಿಗೆ ನರಕವೇ ಮುಗಿಯದ ನೆಲೆ ಎಂದು ಕೇಳಿ ಬಲ್ಲೆವು.

ಇಹದಲ್ಲೂ ನರಕ, ಪರದಲ್ಲೂ ನರಕ, ಹೀಗೆ ಜನ್ಮವೆಲ್ಲಾ ನರಕದಲ್ಲಿ. ಎಂದೆಂದೂ ನರಕದಲ್ಲೇ ಕೊಳೆಯುವ ಪರಿಸ್ಥಿತಿ ಬರುತ್ತದೆ ಎಂದು ತಿಳಿದವರು ಹೇಳುವುದನ್ನು ಕೇಳಿ ತಿಳಿದಿದ್ದೇನೆ. ಹೀಗೆ ಇಹವೂ ನರಕ, ಪರವೂ ನರಕವಾಗಲು ನಾವೇ ಕಾರಣವಾಗುತ್ತೇವೆ.
ಕೃಪೆ ; ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯರು

Thursday, 1 March 2018

💐 *ಮುಂಜಾನೆಯ ಮಾತು* 💐


             
*ಸಮುದ್ರದಲ್ಲಿ ಸ್ನಾನಕ್ಕೆಂದೆ ಬೇರೆ ತೆರೆಗಳಿರುವುದಿಲ್ಲ, ಬಂದ ತೆರೆಗಳಿಗೆ ತಲೆಯೊಡ್ಡಿ ಸ್ನಾನ ಮುಗಿಸಬೇಕು. ಹಾಗೆಯೇ ಬದುಕಿನಲ್ಲಿ ಖುಷಿಗೆಂದೇ ಬೇರೆ ದಿನಗಳಿರುವುದಿಲ್ಲ, ಎಲ್ಲ ದಿನದಲ್ಲೂ ಖುಷಿ ಪಡಲು ಸಾಧ್ಯವಿದೆ, ಅದನ್ನು ಅನುಭವಿಸುವ ಮನಸ್ಸು ನಮ್ಮದಾಗಿರಬೇಕು.*

*ಹದಿ ಹರಯ!*

ಅಪ್ಪ ಬುದ್ದಿ ಹೇಳಿದರೆಂದು ನೀ ಕೋಪಿಸಿಕೊಳ್ಳಬೇಡ,
ಎಷ್ಟೋ ಜನಕ್ಕೆ ಅಪ್ಪನೇ ಇರುವುದಿಲ್ಲ.

ಅಮ್ಮ ಬೈದಳೆಂದು ನೀ ಸಿಟ್ಟಾಗಬೇಡ,
ಎಷ್ಟೋ ಜನಕ್ಕೆ ತಾಯಿಯೇ ಇರುವುದಿಲ್ಲ.

ಅಣ್ಣ ಅಕ್ಕ ಹೊಡೆದರೆಂದು ನೀ ಮುನಿಯಬೇಡ,
ಎಷ್ಟೋ ಜನಕ್ಕೆ ಅಕ್ಕ ಅಣ್ಣಂದಿರೇ ಇರುವುದಿಲ್ಲ.

ಅಪ್ಪ ಕೇಳಿದ್ದೆಲ್ಲ ತಂದುಕೊಡಲಿಲ್ಲ ಎಂದು ನೀ ಬೇಸರಿಸಬೇಡ,
ಎಷ್ಟೋ ಮಕ್ಕಳ ಅಪ್ಪ ಬಾರು ಬಿಟ್ಟು ಮನೆಗೇ ಬರುವುದಿಲ್ಲ.

ಅಮ್ಮ ಮಾಡಿದ ತಿಂಡಿ ಚೆನ್ನಾಗಿಲ್ಲ ಎಂದು ನೀ ಮೂಗು ಮುರಿಯಬೇಡ,
ಎಷ್ಟೋ ಜನರ ಮನೆಯಲ್ಲಿ ಬೆಳಗ್ಗೆ ತಂಗಳನ್ನಕ್ಕೂ ಗತಿ ಇರುವುದಿಲ್ಲ.

ಗುರು ಹಿರಿಯರು ತಿದ್ದಿ ತೀಡುತ್ತಾರೆಂದು ನೀ ಹಳಿಯಬೇಡ,
ಎಷ್ಟೋ ಜನರಿಗೆ ಶಾಲೆಗೆ ಹೋಗುವ ಭಾಗ್ಯವೇ ಇರುವುದಿಲ್ಲ.

ಜನರು ನಿನ್ನ ನಡೆ - ನುಡಿ, ಉಡುಗೆ - ತೊಡುಗೆಗಳನ್ನು ಸದಾ ಕಾಲ ಹದ್ದಿನ ಕಣ್ಣಿಟ್ಟು ಗಮನಿಸಿ ಮಾತನಾಡಿಕೊಳ್ಳುತ್ತಾರೆಂದು ಸಮಾಜವನ್ನು ದ್ವೇಷಿಸಬೇಡ,
ಯಾಕೆಂದರೆ ಬೆಂಗಳೂರಿನಂಥ ನಗರಗಳಲ್ಲಿ ನೀನು ಕುಡಿದು ತೂರಾಡುತ್ತಾ ಸಭ್ಯತೆಯ ಎಲ್ಲೆ ಮೀರಿ ಬೆತ್ತಲಾಗಿ ಚರಂಡಿಯಲ್ಲಿ ಬಿದ್ದರೂ ಯಾರೂ ನಿನ್ನ ಕಡೆ ಕಣ್ಣು ಹಾಯಿಸುವುದೂ ಇಲ್ಲ.

ಎಲ್ಲಿಗೆ ಹೋದೆ? ಯಾಕೆ ಹೋದೆ? ಇಷ್ಟೇಕ ತಡ? ಇಷ್ಟೇಕೆ ಬೇಗ? ಅದು ಏನು? ಇದು ಯಾಕೆ? ಅವರು ಯಾರು? ಇದು ಬೇಕಾ? ಅಂತ ಎಲ್ಲವನ್ನೂ ಪ್ರಶ್ನಿಸುತ್ತಾರೆಂದು ಸಿಡುಕಬೇಡ,
ಎಷ್ಟೋ ಜನರಿಗೆ ನಮ್ಮವರು - ತಮ್ಮವರು, ಹಿಂದು ಮುಂದು, ಬಂಧು - ಬಾಂಧವರು, ಹೇಳುವವರು - ಕೇಳುವವರೇ ಇರುವುದಿಲ್ಲ!

ಇತ್ತ ನೋಡು,

ಭಗವಂತ ನಿನಗೆ ಕೊಟ್ಟ ಭಾಗ್ಯ, ಅಪ್ಪ ಅಮ್ಮ ಅಣ್ಣ ಅಕ್ಕ, ಕುಟುಂಬ, ನೆಂಟರಿಷ್ಟರು, ಗುರು ಹಿರಿಯರು ಮತ್ತು ಸಮಾಜವೆಂಬ ಬಂಧನ. ನಿನ್ನ ರಕ್ಷೆಗೆಂದು ಭಗವಂತನೇ ಕಟ್ಟಿದ ರಕ್ಷಾ ಬಂಧನ!

ಒಂದು ವೇಳೆ ನೀ ಪ್ರಾಣಿಯಾಗಿ ಹುಟ್ಟಿದ್ದಿದ್ದರೆ ಈ ಬಂಧನಗಳ್ಯಾವುದೂ ನಿನಗೆ ಇರುತ್ತಲೇ ಇರಲಿಲ್ಲ.

ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರಾ! ಅನ್ನುವ ದಾಸವಾಣಿ ನಿನಗೆ ಅರ್ಥವೂ ಆಗುತ್ತಿರಲಿಲ್ಲ!

ತಮ್ಮ/ತಂಗಿ,

ಉಳಿಯ ಪೆಟ್ಟು ಬೀಳದಿದ್ದರೆ ಶಿಲೆಯೊಂದು ಮೂರ್ತಿಯಾಗಲು ಸಾಧ್ಯವೇ?

ಹಿರಿಯರ ಬುದ್ಧಿವಾದ ಕೇಳದೇ ಪರಿಪೂರ್ಣ ವ್ಯಕ್ತಿತ್ವ ಪಡೆದ ಜನರು ಈ ಜಗದಲ್ಲಿರುವರೇ?

ನೀನು ದ್ವೇಷಿಸಬೇಕಾಗಿದ್ದು ವಯೋಸಹಜ ಅಹಂಕಾರ, ಜಂಭ, ಮದ, ದೌರ್ಬಲ್ಯ, ಆಕರ್ಷಣೆ, ಚಿತ್ತ ಚಂಚಲತೆ, ಸ್ವಾರ್ಥಗಳನ್ನೇ ಹೊರತು, ಅವುಗಳಿಗೆ ಬಲಿಯಾಗದಂತೆ ಸದಾ ಕಾಲ ನಿನ್ನನ್ನು ರಕ್ಷಿಸುವ ಅಪ್ಪ, ಅಮ್ಮ, ಅಣ್ಣ, ಅಕ್ಕ, ಗುರು - ಹಿರಿಯರು, ನೆಂಟರಿಷ್ಟರು ಮತ್ತು ಸಮಾಜವನ್ನಲ್ಲ.

ಚಿಂತಿಸು, ಭಾವಿಸು, ಯೋಚಿಸು,
ಪರಿಪೂರ್ಣವಾಗಲು ಭಗವಂತ ನಿನಗೆ ಕೊಟ್ಟ ಅವಕಾಶಕ್ಕಾಗಿ ಅವನಿಗೆ ವಂದಿಸು! ಬರುವ ಜನ್ಮದಲ್ಲೂ ಪ್ರತಿ ಜನ್ಮದಲ್ಲೂ ಮತ್ತೆ ಮತ್ತೆ ಇಲ್ಲೇ ಹುಟ್ಟುವಂತಾ ವರವನ್ನು ಪ್ರಾರ್ಥಿಸು!

- ನಿತ್ಯಾನಂದ

Friday, 28 April 2017

ಬದುಕು ವೃತ್ತಿಯಲ್ಲಿಯೇ ತೃಪ್ತಿ ಪಡೆದು ಜೀವನ ಸಾರ್ಥಕ ಮಾಡಿಕೊಳ್ಳೋಣ

ನಮ್ಮ ಬದುಕಿನಲ್ಲಿ ಹುದ್ದೆ ಉದ್ಯೋಗ ಕಂಡುಕೊಂಡ್ಮೇಲೆ,
ನೂರೆಂಟು  ಆಶೆ-ಆಕಾಂಕ್ಷೆಗಳನ್ನು ಕಟ್ಟಿಕೊಳ್ಳುತ್ತೇವೆ.
ಕೆಲಸಮಾಡುತ್ತಾ,ಮಾಡುತ್ತಾ ನಾವು ಮಾಡುವ ಕೆಲಸ ಸಣ್ಣದಾಗುತ್ತದೆ
ಬೇರೆಯವರು ಮಾಡುವ ಹುದ್ದೆ ಶ್ರೇಷ್ಠಎನಿಸಲು ಮನಸಿನಲಿ ಲೆಕ್ಕ ಹಾಕುತ್ತಿರುತ್ತೇವೆಅಲ್ವಾ...?

ಒಂದು ಕಥೆ ನೆನಪಾಗುತ್ತೆ.

ಲೇಖಕರು ವಿದ್ವಾನ್ || ಕೆ.ಚಂದ್ರಶೇಖರ.

ಸುಂದರವಾದಎತ್ತರದ ಮರದ ಕೆಳಗೆ ಹಚ್ಚನೆಯ ಹಸಿರು ತುಂಬಿದ ಹುಲ್ಲು ಅಲ್ಲಿ ಎರಡು ಇಲಿಗಳು ಮರದ ಬೇರನ್ನು ಕಡಿಯುತ್ತಾ ಇರುವಾಗ ಅಲ್ಲಿಯೇ ಬೆಕ್ಕು ಬರುವುದನ್ನು ಕಂಡು ಅಂಜಿ ಇಲಿಯು ನಾನು ಬೆಕ್ಕಾಗಿದ್ದರೆ ಯಾರಿಗೆ ಅಂಜದೇ ಆರಾಮವಾಗಿ ಇರಬಹುದಲ್ಲಾ ಎಂದು ಮನದಲಿ ಬಗೆಯುತ್ತಿರುವಾಗ ಬೆಕ್ಕಾಗಿ ಮಾರ್ಪಟ್ಟಿತು
ಬೆಕ್ಕಾಗಿ ಆರಾಮವಾಗಿ ಇದ್ದರೆ ಆಯ್ತು ಎನ್ನುವಷ್ಟರಲ್ಲಿ ನಾಯಿ ಅಟ್ಟಿಸಿಕೊಂಡು ಬರುತ್ತದೆ. ನಾನು ನಾಯಿ ಆಗಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದಾಗ ನಾಯಿ ಆಯಿತು  ಖುಷಿಯಾಯಿತು.
ಆನೆಯು ನಾಯಿಯನ್ನು ಬೆನ್ನಟ್ಟಿಕೊಂಡು ಬಂದಾಗ ಆನೆಯಾಗಿದ್ದರೆ ಚೆನ್ನ ಎಂದಿತು ಮರುಕ್ಷಣವೇ ಆನೆ ಆಯಿತುನನ್ನಷ್ಟು ಬಲಶಾಲಿ ಯಾರು ಇಲ್ಲ ನನ್ನನ್ನೂ ಯಾರು ಕೊಲ್ಲಲಾರರು ಎಂದು ಗರ್ವದಿಂದ ಹೆಮ್ಮೆ ಪಟ್ಟಿತು.
ಸಿಂಹವು ಆನೆಯನ್ನು ಬೆನ್ನಟ್ಟಿ ಕೊಂಡು ತಿನ್ನಲು ಬಂದಾಗ ಅಯ್ಯೋ! ನಾನು ಸಿಂಹವುಆಗಿದ್ದರೆ ಚೆನ್ನಾಗಿರತ್ತಿತ್ತು ಎಂದಾಕ್ಷಣ ಸಿಂಹವಾಯಿತು,ನಾನೇ ಕಾಡಿನ ರಾಜ ನನ್ನನ್ನೂ ಯಾರು ಏನು ಮಾಡಲಾರರು ಎಂದು ಆನಂದ ಪಟ್ಟಿತು. ಬೇಟೆಗಾರ ಬಿಲ್ಲು ಬಾಣ ತೆಗಿದುಕೊಂಡು ಬೆನ್ನಟ್ಟಿಕೊಂಡು ಬಂದಾಗ ಓಡಲು ಪ್ರಾರಂಭಿಸಿತು,
ಅಯ್ಯೋ ಬೇಟಗಾರನಾದರೆ ಚೆನ್ನಾಗಿರುತ್ತಿತ್ತು ಎಂದುಕೊಂಡಾಕ್ಷಣ ಬೇಟಾರನಾಗಿ ಮಾರ್ಪಟ್ಟಿತು
ಬೇಟೆಗಾರನಾದ ಮೇಲೆ ಬೇಟೆ ಆಡಲು ಕಾಡೆಲ್ಲ ಸುತ್ತಿ,ಸುತ್ತಿಸುಸ್ತು ಆದರೂ, ಒಂದು ಪ್ರಾಣಿಯು ಸಿಗಲೇ ಇಲ್ಲ. ಆಯಾಸಗೊಂಡು ಎತ್ತರವಾದ ಸುಂದರವಾದ  ಮರದ ಕೆಳಗೆ ಕುಂತು ವಿಶ್ರಾಂತಿ ಪಡೆಯುತ್ತಿರು
ವಾಗ, ಎಷ್ಟು ಕಷ್ಟದ ಜೀವನ
ಇದು ಎಂದು, ಮೇಲೆ ನೋಡಿದಾಗ,
ಸುಂದರವಾದ ಮರ ಕಾಣಿಸುತ್ತದೆ,
ಮರವಾದರೆ ಬೇಟೆ ಆಡುವುದು,
ಹೊಟ್ಟೆ ತುಂಬಿಸಿಕೊಳ್ಳುವ ಕಷ್ಟ ತಪ್ಪುತ್ತದೆ ಎಂದು ವಿಚಾರ ಮಾಡಿ,
ಮರವಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದಾಕ್ಷಣ ಮರವಾಯಿತು. ನಾನು ಇನ್ಮುಂದೆ ಆರಾಮವಾಗಿ ಜೀವಿಸಬಹುವುದು ಜೀವ ಭಯ ಯಾರ ಹೆದರಿಕೆಯೂ ಇಲ್ಲ ಎಂದು ಖುಷಿಪಟ್ಟು ಕೆಳಗಡೆ ನೋಡುತ್ತಿರುವಾಗ ಇಲಿಗಳು ಮರದ ಬೇರುಗಳನ್ನು ಕಡಿಯುತ್ತಿದ್ದವು
ಅಯ್ಯೋ..! ನನ್ನ ಬೇರುಗಳನ್ನು ಕಡಿದರೆ ನಾನು ನೆಲಕ್ಕೆ ಉರುಳಿ ಒಣ ಕಟ್ಟಿಗೆಯಾಗಿ ಗೆದ್ದಲು ಹಿಡಿದು ಸತ್ತೋಗುತ್ತೇನೆ ಎಂದು ರೋದಿಸಿ ನಾನು ಇಲಿಆಗಿದ್ದರೆ ಚೆನ್ನಾಗಿರುತ್ತಿತ್ತು ಎಂದಾಕ್ಷಣ ಇಲಿ ಆಯಾಯಿತು. ಆ ಇಲಿಗೆ ನಿದ್ದೆಯಿಂದ ಎಚ್ಚರವಾಯಿತು.
ಕನಸಿನಿಂದ ಹೊರಬಂದು ಯಾವುದೂ ಶ್ರೇಷ್ಠ ಅಲ್ಲನನ್ನ ಬದುಕು,ನನ್ನ ವೃತ್ತಿಯೇ ಶ್ರೇಷ್ಠ
ಎಂದು, ಅರಿವಾಯಿತು.

ಆದ್ದರಿಂದ ನಾವೂ  ಕೂಡಾ ಇರುವ ವೃತ್ತಿಯಲ್ಲಿ ತೃಪ್ತಿ ಪಡದೇ  ಡಿ.ಸಿ. ಆಗಬೇಕು,ತಹಶೀಲ್ದಾರ ಆಗಬೇಕು, ಇನ್ನೇನೋ ಅಧಿಕಾರಿ ಆಗಬೇಕುಅದು ಶ್ರೇಷ್ಠ. ಆಗ ಆರಾಮವಾಗಿರುತ್ತೇವೆ,
ನನ್ನ ವೃತ್ತಿ ನನ್ನ ಜೀವನ ಸರಿಯಿಲ್ಲ ಎಂದು ಮರುಗಿ ದುಃಖಪಟ್ಟರೇ ಇಲಿಯ ಕನಸಿನಂತೆ ಅಲ್ವಾ..?

ಇದ್ದ ಬದುಕು ವೃತ್ತಿಯಲ್ಲಿಯೇ ತೃಪ್ತಿ ಪಡೆದು ಜೀವನ ಸಾರ್ಥಕ ಮಾಡಿಕೊಳ್ಳೋಣ

ನಮ್ಮ ಬದುಕು, ನಮ್ಮ ವೃತ್ತಿಯೇ ಶ್ರೇಷ್ಠ ಎಂದು ಸಾರೋಣ

ಈ ಪ್ರಪಂಚಕ್ಕೆನಾವು ಬಂದಿರುವುದು ನಾವು ಕಟ್ಟಿಕೊಂಡ ಬದುಕಿನಲ್ಲಿ ಸಂತೋಷದಿಂದ ಬದುಕುವುದಕ್ಕೆ .
ಇಲ್ಲ ಸಲ್ಲದ ಆಸೆಗಳಿಂದ ನಗು ಮತ್ತು ಸಂತೋಷವನ್ನೇಮರೆತು ಹೋಗಿದ್ದೇವೆ.
ಯಾರನ್ನು ನೋಡಿದರೂ ಗಂಟು ಮುಖ, ಮುಖದಲ್ಲಿ ದುಗುಡತೆ.

ಬೇಡ ಸ್ನೇಹಿತರೇ ನಾವೇನು ಈ ಭೂಮಿ ಮೇಲೆ ಸಾವಿರ ವರ್ಷ ಇರಲ್ಲ .

ನಗುವೇ ಜೀವನ
ನಗುವಂತಹ ಸನ್ನಿವೇಶ ಬಂದರೆ ಬಾಯ್ತುಂಬಾ ನಗ್ರಿ

ನಗಿಸಿರಿ.

ನಗ್ನಗ್ತಾ ಇರಿ........,

Saturday, 22 April 2017

*ಕಳೆದ ಕಾಲ ಮರಳಿ ಬರುವುದಿಲ್ಲ*


* ಅಂಗಡಿಯಲ್ಲಿ ಮಿಠಾಯಿಗಳು ಇವತ್ತಿಗೂ ಇವೆ, ಚಪ್ಪರಿಸಿ ತಿನ್ನಲು ಬಾಲ್ಯದ ಸ್ನೇಹಿತರಿಲ್ಲ

*ಕಲಿತ ಶಾಲೆಯ ಗುರುಗಳು ಇವತ್ತಿಗೂ ಇದ್ದಾರೆ, ಹೋಗಿ ಮಾತನಾಡಿ ಬರಲು ಪುರುಸೊತ್ತು ಇಲ್ಲ

* ಗೂಡಂಗಡಿಗಳು ಇನ್ನೂ ಉಸಿರಾಡುತ್ತಿವೆ, ಅಂಗಡಿ ಬಾಗಿಲ ಬಳಿ ಹೋಗಲು ಮಾಲ್ ಗಳು ಬಿಡುತ್ತಿಲ್ಲ

*ಅಂಚೆ ಕಛೇರಿಗಳು ಇಂದಿಗೂ ಇವೆ, ಕಾಗದ ಬರೆಯಲು ಮೊಬೈಲ್ ಗಳು ಬಿಡುತ್ತಿಲ್ಲ.

* ಕಾದಂಬರಿಗಳ ಪುಸ್ತಕಗಳು ಕಪಾಟುಗಳಲ್ಲಿ ಇನ್ನೂ ಇವೆ, ತೆರೆದು ಓದುವಷ್ಟು ಸಮಯವನ್ನು ಟಿ.ವಿ ಮಾಡಿಕೊಡುತ್ತಿಲ್ಲ

*ಹಕ್ಕಿಗಳು ಇಂದಿಗೂ ಹಾಡುತ್ತಿವೆ, ಕೂತು ಆಲಿಸುವ ವ್ಯವಧಾನವೇ ಇಲ್ಲ

* ಹೂ ಗಿಡದಲ್ಲಿ ಹೂವುಗಳು ಇವತ್ತಿಗೂ ಅರಳುತ್ತಿವೆ, ಮಕರಂದ ಹೀರುವ ದುಂಬಿಗಳ ನೋಡುವ ಮನಸ್ಸೇ ಇಲ್ಲ

* ಹಣ್ಬಿಟ್ಟ ಮರ, ಹಬ್ಬಿದ ಬಳ್ಳಿ, ಗುಬ್ಬಿ ಹಕ್ಕಿಯ ಕಣ್ಣೋಟ, ಹಬೆಯಾಡುವ ಚಹ ಎಲ್ಲವೂ ಇವೆ, ಸ್ಪಂದಿಸಲು ಬಿಡುವಿಲ್ಲ

* ಬಾನಲ್ಲಿ ನಕ್ಷತ್ರಗಳು ಇವತ್ತಿಗೂ ಇವೆ, ಕುಳಿತು ಲೆಕ್ಕ ಹಾಕುವುದಕ್ಕೆ ಸಮಯವೇ ಇಲ್ಲ

* ಬೆಳದಿಂಗಳ ರಾತ್ರಿ ಇಂದಿಗೂ ಇದೆ, ಸುರಿವ ಬೆಳದಿಂಗಳಲ್ಲಿ ಕುಳಿತು ಹಾಡಲು ಕಾಲ ಕೂಡಿಬರುತ್ತಿಲ್ಲ

* ಸಂಬಂಧ, ಬಾಂಧವ್ಯಗಳು ಇವತ್ತಿಗೂ ಇವೆ, ನಿಭಾಯಿಸಲು ಅಹಂ ಬಿಡುತ್ತಿಲ್ಲ

* ಬಾಲ್ಯದಲ್ಲಿದ್ದಂತೆ ಸಾಧಾರಣವಾಗಿ ಬದುಕಲು ಇವತ್ತಿಗೂ ಆಸೆಯಿದೆ, ಪರರ ವೈಭೋಗ ಹಾಗಿರಲು ಬಿಡುತ್ತಿಲ್ಲ

*ಅಮ್ಮನ ಕೈತುತ್ತು, ಅಪ್ಪನ ಗದರಿಕೆ, ಅಜ್ಜಿಯ ಪ್ರೀತಿ, ಅಜ್ಜನ ಕೆಮ್ಮು, ದೊಡ್ಡಪ್ಪನ ಠೀವಿ, ಚಿಕ್ಕಪ್ಪನ ಸ್ನೇಹಭಾವ, ಮಾವನ ಭಯ, ಅತ್ತೆಯ ಆರೈಕೆ, ಚಿಕ್ಕಮ್ಮನ ಮುದ್ದ ಓರಗೆಯವರೊಂದಿಗಿನ ಒಡನಾಟ ಎಲ್ಲವೂ ಇತ್ತು ಹಾಗೂ ಇದೆ... ನಿಭಾಯಿಸುವುದಕ್ಕೆ ವ್ಯವಧಾನವಿಲ್ಲ

ನಿಜಕ್ಕೂ ಕಳೆದ ಕಾಲ ಮರಳಿ ಬರುವುದಿಲ್ಲ....

Friday, 14 April 2017

👉ಪರಿಪೂರ್ಣವಾಗಿ ಪರಿಶುದ್ಧ ಜೀವನ ನಡೆಸಲು ಕೆಲವು ಮಾರ್ಗಗಳು👇

👉ನಗರದಲ್ಲಿ 50ಲಕ್ಷ ಖಚು೯ ಮಾಡಿ ಮನೆ ಕಟ್ಟಿಸುವ
ಬದಲು 👇

ಹಳ್ಳಿಯಲ್ಲಿ ಕೃಷಿ ಭೂಮಿಯನ್ನು ಖರೀದಿಸಿ..👌

💛❤💛❤💛❤💛❤💛

👉30000 ರೂ ಖಚು೯ ಮಾಡಿ AC ಖರೀದಿಸುವ
ಬದಲು 👇

30 ರೂ ಖಚು೯ ಮಾಡಿ ಮನೆಯ ಆವರಣದಲ್ಲಿ ಸಸಿಯನ್ನು ನೆಡಿ..👌

💛❤💛❤💛❤💛❤💛

👉ಶುಗರ್, ಬಿಪಿ, ಹೃದಯ ಕಾಯಿಲೆಗಳಿಗಾಗಿ ದಿನಕ್ಕೆ 3 ಬಾರಿಯಂತೆ ತಿಂಗಳ ಔಷಧಿಗಳ ಮೆನು ಸಿದ್ಧಪಡಿಸುವ
ಬದಲಾಗಿ👇

ದಿನಕ್ಕೆ 3 ಹೊತ್ತು ಯಾವ ಯಾವ ಹಣ್ಣು ತರಕಾರಿಗಳನ್ನು ತಿನ್ನಬೇಕೆಂಬುವುದರ ಮೆನು ಸಿದ್ದಪಡಿಸಿಕೊಳ್ಳಿ..👇


💛❤💛❤💛❤💛❤💛

👉Week end ಅಂತ ವಾರದ ಕೊನೆಯ ಎರಡು ದಿನಗಳನ್ನು ನಗರದ ಬೀದಿ, ಮಾಲ್ ಗಳಲ್ಲಿ ಅಲೆಯುವ
ಬದಲು 👇

ತೋಟಗಳಲ್ಲಿನ ಗಿಡ-ಮರ, ಪಕ್ಷಿ- ಪ್ರಾಣಿಗಳ ಜೊತೆ ಕಳೆಯಿರಿ..👌

💛❤💛❤💛❤💛❤💛

👉ಪಿಜ್ಜಾ ಬಗ೯ರ್, ಬಟ್ಟೆಗಳಿಗಾಗಿ ನೀರಿನಂತೆ ಹಣ ಖಚು೯ ಮಾಡುವ
ಬದಲು👇

ಹೊಟ್ಟೆಗಾಗಿ ತಾಜಾ ಹಣ್ಣು ತರಕಾರಿಗಳನ್ನು ಸವಿಯಲು ಖಚು೯ ಮಾಡಿ👌

💛❤💛❤💛❤💛❤💛

👉ಸಲೂನ್ ಗಳಲ್ಲಿ ಮಸಾಜ್, ಸೌಂದಯ೯ಕರಣಕ್ಕಾಗಿ ಖಚು೯ ಮಾಡುವ
ಬದಲು👇

👉ಮಾನವೀಯತೆಯಿಂದ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳಿ..👌

💛❤💛❤💛❤💛❤💛

👉ಲೇಟ್ ನೈಟ್ ಪಾಟಿ೯ಗಳಿಗಾಗಿ ಸಮಯ - ಹಣ ಕಳೆಯುವ
ಬದಲಾಗಿ 👇

ನಸುಕಿನ ಜಾವ ಹೊಲ-ಮನೆ  ಕೆಲಸಗಳನ್ನು ಮಾಡಿ..👌

💛❤💛❤💛❤💛❤💛

👉ಗರ್ಲ್ ಫ್ರೆಂಡ್ಸ್, ಬಾಯ್ ಫ್ರೆಂಡ್ಸ್ ಗೋಸ್ಕರ ರಾಶಿ ರಾಶಿ ಗಿಫ್ಟ್ ಪ್ರೆಸೆಂಟ್ ಮಾಡುವ
ಬದಲು👇

ಬಂಧುಗಳಿಗಾಗಿ, ಬಡಜನರಿಗಾಗಿ ಸಹಾಯ ಮಾಡಲು ಖಚು೯ ಮಾಡಿ..👌

💛❤💛❤💛❤💛❤💛

👉ಕ್ರಿಕೆಟ್ -ಸಿನೆಮಾ ತಾರೆಯರನ್ನು, ಪರಸ್ತ್ರೀ - ಪರಪುರುಷರನ್ನು ಮೋಹಿಸುವ
ಬದಲು👇

ನಿಮ್ಮ ಸ್ವಂತ ತಂದೆ - ತಾಯಿ,ಗಂಡ - ಹೆಂಡತಿ, ಬಂಧು- ಬಳಗ ಹಾಗೂ ಸ್ನೇಹಿತರನ್ನು ಪ್ರೀತಿಸಿ..👌👍

💛❤💛❤💛❤💛❤💛

👉ಮೇಲಿನ ಎಲ್ಲ ಆಧುನಿಕ ಆಡಂಬರ ಜೀವನ , ತೋರಿಕೆಯ ಜೀವನದಿಂದಾಗಿ ನಾವು ಹಣ - ಗುಣ ಮತ್ತು ಆರೋಗ್ಯ- ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ. ಅಲ್ಲದೆ ನಮ್ಮ ಅರಿವಿಗೆ ಬಾರದಂತೆ ನಮ್ಮನ್ನಾಳುತ್ತಿರುವ ಜನರನ್ನು ಕುಬೇರರನ್ನಾಗಿಸುತ್ತಿದ್ದೇವೆ.

ಅದರ ಬದಲು👇

ನೈಜ ಜೀವನವನ್ನು ನಾವು ರೂಢಿಸಿಕೊಂಡಲ್ಲಿ ಸ್ವಸ್ಥ ಆರೋಗ್ಯ, ನೆಮ್ಮದಿಯ ಜೀವನವನ್ನು ನಮ್ಮದಾಗಿಸಿಕೊಂಡು, ರಕ್ತ ಹೀರುವ ಎಲ್ಲ ಪರೋಪ ಜೀವಿಗಳ ಬಾಧೆಯಿಂದ ಮುಕ್ತರಾಗಿ ನಾವೇ ಆರೋಗ್ಯ ಹಾಗೂ ಐಶ್ವಯ೯ವಂತರಾಗಿ  ಬದುಕಬಹುದು..👌👍

💛❤💛❤💛❤💛❤💛

ಈಗ👇

ನಿಮಗೆ ಯಾವ ರೀತಿಯ ಜೀವನ ಬೇಕೆಂಬುದನ್ನು ನೀವೇ ನಿಧ೯ರಿಸಿಕೊಂಡು ಬದುಕಿ..

ಏಕೆಂದರೆ👇

ನಾವು ಮಾಡುವ ಕಾರ್ಯಗಳು ಒಳ್ಳೆಯವೋ ಅಥವಾ ಕೆಟ್ಟವೋ ಆಗಿರಬಹುದು.. ಆದರೆ ಆ ಕಾರ್ಯಗಳಿಗೆ ತಕ್ಕಂಥ ಪ್ರತಿಫಲಗಳನ್ನು ದೇವರು ಮುಂದೊಂದು ದಿನ ಕೊಟ್ಟೇ ಕೊಡುತ್ತಾನೆ ಎಂಬುದನ್ನು ಮರೆಯದಿರಿ🙏

💛❤💛❤💛❤💛❤💛

ಒಳ್ಳೆ ಕಾರ್ಯಗಳನ್ನು ಮಾಡಿ👌 ಒಳ್ಳೆಯ ಪ್ರತಿಫಲಗಳನ್ನು ಸ್ವೀಕರಿಸಿ👍......🙏

Tuesday, 11 April 2017

*Discussions

*Discussions are always better than arguments,*

*because an argument is to find out who is right,*

*and a discussion is to find what is right.*

*ಹಸಿವಿನ ಆರ್ಭಟ*

```ಒಂದು ಬಡ ಕುಟುಂಬವಿತ್ತು.
ಆ ಕುಟುಂಬದಲ್ಲಿ 5 ಜನರಿದ್ದರು. ತಂದೆ ತಾಯಿ ಮತ್ತು ಮೂವರು ಮಕ್ಕಳು,
ತಂದೆ ಯಾವತ್ತೂ ಅನಾರೋಗ್ಯದಿಂದ ಇರುತ್ತಿದ್ದನು, ಕಡೆಗೆ ಒಂದು ದಿನ ತಂದೆ ಸಾಯುತ್ತಾನೆ, 3 ದಿನಗಳವರೆಗೆ ಅಕ್ಕಪಕ್ಕದವರು ಊಟ ಕೊಡುತ್ತಾರೆ.
ನಂತರ ಉಪವಾಸ ಇರಬೇಕಾದ ಪರಿಸ್ಥಿತಿ ಬರುತ್ತದೆ. ತಾಯಿಯು ಕೆಲದಿನಗಳವರೆಗೆ ಹಾಗೋ ಹೀಗೋ ಮಾಡಿ ಮಕ್ಕಳಿಗೆ ಊಟ ಕೊಡುತ್ತಾಳೆ, ಆದರೆ ಎಲ್ಲಿಯವರೆಗೆ? ಕೊನೆಗೆ ಮತ್ತೆ ಹಸಿದ ಹೊಟ್ಟೆಯಲ್ಲಿ ಉಪವಾಸ ಇರಬೇಕಾದ ಪರಿಸ್ಥಿತಿ ಬರುತ್ತದೆ. ಆಹಾರವಿಲ್ಲದೇ ಅನಾರೋಗ್ಯದಿಂದ 8 ವರ್ಷದ ಮಗ ಹಾಸಿಗೆ ಹಿಡಿಯುತ್ತಾನೆ.
ಒಂದು ದಿನ..
5 ವರ್ಷದ ಮಗು ಅವಳ ತಾಯಿಯ ಕಿವಿಯಲ್ಲಿ ಕೇಳುತ್ತದೆ. "ಅಮ್ಮಾ ಅಣ್ಣ ಯಾವಾಗ ಸಾಯುತ್ತಾನೆ?"
ಆಗ ತಾಯಿ ದುಃಖದಲ್ಲಿ ಕೇಳುತ್ತಾಳೆ ಯಾಕಮ್ಮ ಹಾಗೆ ಕೇಳ್ತಿಯಾ?.

ಆ 5 ವರ್ಷದ ಮಗು ಉತ್ತರ ಹೇಳುತ್ತದೆ ಆ ಉತ್ತರ ಕೇಳಿದರೆ ನಿಮ್ಮ ಕಣ್ಣುಗಳಲ್ಲಿ ಕಣ್ಣೀರು ಬರುತ್ತವೆ.

ಆ ಮಗುವಿನ ಉತ್ತರ ಹೀಗಿರುತ್ತದೆ "ಅಮ್ಮಾ. ಅಣ್ಣ ಸತ್ತರೆ ಊಟ ಅಕ್ಕಪಕ್ಕದವರು ಊಟ ಕೊಡ್ತಾರಮ್ಮಾ...!

ಗೆಳೆಯರೇ ನಮ್ಮ ಆಹಾರದಲ್ಲಿ ಬಡವರ ಪಾಲೂ ಇದೆ.

ಬಡವರಿಗೆ ಸಹಾಯ ಮಾಡುವುದರಲ್ಲಿಯೂ ಸಂತೋಷವಿದೆ.
"ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ"

Monday, 10 April 2017

ಅರಮನೆ

ಅರಮನೆ ಕಟ್ಟುವ ಸೀರಿತನ
    ಇಲ್ಲದಿದ್ದರೆನು
ಕಣ್ಣೀರ ಒರೆಸುವ ಗೇಳೆತನ
     ಇದ್ದರೆ ಸಾಕು

Thursday, 6 April 2017

दोस्तों ये आज की सच्चाई है

पापा पापा मुझे चोट लग गई खून आ रहा है
5 साल के बच्चे के मुँह से सुनना था
कि पापा सब कुछ छोड़ छाड़ कर
गोदी में उठाकर एक किलो मीटर की दूरी पर क्लिनिक तक भाग भाग कर ही पहुँच गए
दुकान कैश काउंटर सब नौकर के भरोसे छोड़ आये
सीधा डाक्टर के केबिन में दाखिल होते हुए डॉक्टर को बोले
देखिये देखिये डॉक्टर
मेरे बेटे को क्या हो गया
डॉक्टर साहब ने देखते हुए कहा
अरे भाई साहब घबराने की कोई बात
है मामूली चोट है.... ड्रेसिंग कर दी है
ठीक हो जायेगी।
डॉक्टर साहब कुछ पेन किलर लिख देते दर्द कम हो जाता । अच्छी से अच्छी दवाईया लिख देते ताकि
जल्दी ठीक हो जाये घाव भर जाये
*डाक्टर* अरे भाई साहब क्यों इतने परेशान हो रहे हो कुछ नहीं हुआ है
3-4दिन में ठीक हो जायेगा
पर डॉक्टर साहब इसको रात को नींद तो आजायेगी ना ।
*डॉक्टर* अरे हाँ भाई हाँ आप चिंता मत करो। बच्चे को लेकर लौटे तो नौकर बोला सेठ जी आपका ब्रांडेड महंगा शर्ट खराब हो गया खून लग गया अब
ये दाग नही निकलेंगे
*भाई साहब* कोई नहीं
ऐसे शर्ट बहुत आएंगे जायेंगे मेरे बेटे का खून बह गया वो चिंता खाये जा रही है कमजोर नहीं हो जाये । तू जा एक काम कर थोड़े सूखे मेवे फ्रूट ले आ इसे खिलाना पड़ेगा और मैं चलता हूँ घर पर
*40 साल बाद*
दुकान शोरूम में तब्दील हो गई है
भाई साहब का बेटा बिज़नस बखूबी संभाल रहा है
भाई साहब रिटायर्ड हो चुके हैं घर पर ही रहते है
तभी घर से बेटे की बीवी का फोन आता है
*बीवी* अजी सुनते हो ये आपके पापा पलंग से गिर गए हैं
सर पर से खून आ रहा है
*लड़का* अरे यार ये पापा भी न
इनको बोला ह जमीन पर सो जाया करो पर मानते हीे नही पलंग पर ही सोते है
अरे रामु काका जाओ तो घर पर पापा को डॉक्टर अंकल के पास ले कर आओ मैं मिलता हूँ वहीँ पर।
बूढ़े हो चुके रामु काका चल कर धीरे धीरे घर जाते है
तब तक सेठजी का काफी खून बह चुका था
बहु मुँह चढ़ा कर बोली
ले जाओ जल्दी पूरा महंगा कालीन खराब हो गया है
काका जैसे तैसे जल्दी से रिक्शा में सेठजी को डाल कर
क्लीनिक ले गए
बेटा अब तक नही पंहुचा था
काका ने फोन किया तो बोला
अरे यार वो कार की चाबी नही मिल रही थी अभी मिली है
थोड़े कस्टमर भी है आप बैठो लेकर मैं आता हूँ
जो दूरी 40 साल पहले एक बाप ने
बेटे के सर पर खून देखकर 10 मिनट में बेटे को गोदी में उठा कर भाग कर तय कर ली थी
बेटा 1घन्टा 10 मिनट में कार से भी तय नही कर पाया था
डाक्टर ने जैसे ही भाई साहब को देखा उनको अंदर ले गए इलाज चालू किया
तब तक बेटा भी पहुँच गया
डॉक्टर अंकल बोले
बेटे खून बहुत बह गया है
एडमिट कर देते तो ठीक रहता
*बेटा* अरे कुछ नही डाक्टर साहब
आप ड्रेसिंग कर दो ठीक हो जायेगा
2-4 दिन में ।
डाक्टर अंकल बोले ठीक है कुछ दवाईया लिख देता हूँ थोड़ी महंगी है लेकिन आराम जल्दी हो जायेगा
*लड़का* अरे डॉक्टर अंकल चलेगा 4-5 दिन ज्यादा लगेंगे तो अब इतनी महंगी दवाइयो की क्या जरूरत । चलो मुझे निकलना पड़ेगा शोरूम पर कोई नहीं है ।
ये सुनते ही डॉक्टर अंकल के सब्र का बांध टूट गया
और 40 साल पहले की घटना पूरी सुनाई
बेटे की आँखों आंसू बहने लगे उसे बहुत पस्च्याताप हुआ।
तभी बहू का फोन आया
वो महंगा कालीन खराब हो गया है
क्या करूँ ।
बेटा बोला कालीन ही खराब हुआ है ना .....
नया आजायेगा
तुम पलंग पर नया चद्दर और गद्दा डालो मैँ पापा को ले कर आ रहा हूँ
भाई साहब के आँखों में आँसू थे
और ये ख़ुशी के थे
चोट का दर्द गायब था बेटे
के अपनेपन ने सब भुला दिया।
बस अब तो मौत भी आ जाये तो
मंजूर है ।
दोस्तों ये आज की सच्चाई है
आज हमारे अंदर का इंसान मर चुका है ।
माँ बाप अकेलेपन का जीवन जी
रहे हैं
और
बेटा कामयाबी और दौलत
की चकाचौंध में खो कर सब कुछ भूल चुका है ।
==========================

Maturity Of Six Year Old Boy

A 6 yr old boy was in the market with his 4 yr old sister. Suddenly the boy found that his sister was lagging behind.

He stopped and looked back. His sister was standing in front of a toy shop and was watching something with great interest.

The boy went back to her and asked, “Do you want something?” The sister pointed at the doll. The boy held her hand and like a responsible elder brother, gave that doll to her. The sister was very very happy…

The shopkeeper was watching everything and getting amused to see the matured behaviour of the boy…

Now the boy came to the counter and asked the shopkeeper, “What is the cost of this doll, Sir? !”

The shopkeeper was a cool man and had experienced the odds of life. So he asked the boy with a lot of love & affection, “Well, What can you pay?”

The boy took out all the shells that he had collected from sea shore, from his pocket and gave them to the shopkeeper. The shopkeeper took the shells and started counting as if he were counting the currency. Then he looked at the boy. The boy asked him worriedly, “Is it less?”

The shopkeeper said, “No, No… These are more than the cost. So I will return the remaining.” Saying so, he kept only 4 shells with him and returned the remaining.

The boy, very happily kept those shells back in his pocket and went away with his sister.

A servant in that shop got very surprised watching all these. He asked his master, “Sir ! You gave away such a costly doll just for 4 shells ???”

The shopkeeper said with a smile, “Well, for us these are mere shells.

But for that boy, these shells are very precious. And at this age he does not understand what money is, but when he will grow up, he definitely will. And when he would remember that he purchased a doll with the Shells instead of Money, he will remember me and think that world is full of Good people.

It will help him develop a positive attitude and he too in turn will feel motivated to be Good.”

Moral – Whatever emotion you infuse into the world, it will further spread. If you do good, goodness will spread. If you do bad, negativity will spread.

Realize you are a very powerful source of energy.

Your good or bad will come back to you magnified. Not in the ways you want it, and probably not in the ways you can understand it. But it will come back.

Saturday, 1 April 2017

"न मैं *गिरा*

"न मैं *गिरा*,और न मेरी उम्मीदों के *मीनार* गिरे..! पर.. *लोग* मुझे गिराने मे कई बार *गिरे*...!!"

सवाल *जहर* का नहीं था वो तो मैं पी गया,
तकलीफ लोगों को तब हुई, जब मैं *जी गया.*

"LIFE is to enjoy"

An Old man has 8 hair on his head.

He went to Barber shop.
 
Barber in anger asked:

shall i cut or count ?

Old man smiled and said:

"Colour it!"

LIFE is to enjoy with whatever you have with you, keep smiling.

If you feel STRESSED,

Give yourself a Break,

Enjoy Some..

Ice cream

Chocolates

Cake

Why?

B'Coz

STRESSED in reverse Spelling -

DESSERTS !!!

Alphabetic advice for you:

A B C

Avoid Boring Company..

D E F

Don't Entertain Fools..

G H I

Go for High Ideas .

J K L M

Just Keep a friend like ME..

N O P

Never Overlook the Poor n suffering..

Q R S

Quit Reacting to Silly tales..

T U V

Tune Urself for ur Victory..

W X Y Z

We Xpect You to Zoom ahead in life

If you see the moon ..... You see the beauty of God .....
If you see the Sun ..... You see the power of God ..... And ....
If you see the Mirror..... You see the best Creation of GOD .

So Believe in YOURSELF.

Our aim in life should be
9 8 7 6 5 4 3 2 1 0

9 - glass drinking water.
8 - hrs sound sleep.
7 - wonders tour with family.
6 - six digit income.
5 - days work a week
4 - wheeler.
3 - bedroom flat
2 - cute children.
1 - sweetheart.
0 - tension !

"Rules are inflexible"

An old lady handed her cheque to a bank teller and said, “I would like to withdraw ₹500..”

The female teller told her, “For withdrawals less than ₹5,000, please use the ATM”.

The old lady then asked, “Why?” The teller irritably told her, “These are rules. Please leave if there is no other matter. There is a queue behind you.” She then returned the card to the old lady.

The old lady remained silent. But she returned the cheque to the teller and said, “Please help me withdraw all the money I have.” 

The teller was astonished when she checked the account balance. She nodded her head, leaned down and said to the old lady, “My apologies Granny, you have ₹3.5 billion in your account and our bank does not have so much cash currently. Could you make an appointment and come again tomorrow?"

The old lady then asked, “How much am I able to withdraw now?”

The teller told her, “Any amount up to ₹300,000.”

The old lady then told the teller that she wanted to withdraw ₹300,000 from her account. The teller did so quickly and handed it to the old lady respectfully. The old lady kept ₹500 in her bag and asked the teller to deposit the balance of ₹299,500 back into her account.  The teller was dumbfounded.

The moral of this story is that rules are inflexible but we humans can be flexible when the situation requires us to be. We should not treat people based on their looks or how they are dressed. Rather, we should treat everyone with respect. And ... never be too quick to judge a book by its cover.

*LESSON FOR PARENTS*

In two independent houses,separeted by a compound two people were living, in one a retired person and in the other a techie.
They had planted identical saplings on either sides of the compound.
The techie used to give lot of water and manure to the plants.The retired,just small quantity of water and little manure.
The techies plant grew into lush green,leafy robust plant.
The retired person's plant was a near normal but much luxuriant than his neighbor's.
One night there was a heavy rain with gusty wind.
Next morning both came out to see the fate of the plants.
To techie's surprise his plant had got uprooted where as his neighbor's was unharmed.
Techie asks the retired as why his plant was uprooted despite such a good care where as the neighbor had hardly cared.
The retired person's answer should be a lesson for all of us.
*Look young man, you had supplied every thing a plant would need,in abundance and the plant did not have to go in search of it.Your roots did not have go down. I was supplying just enough to keep it alive. For the rest roots had to go down into the ground to fulfil it's needs.
Since your roots were superficial the rain and wind could easily fell it.
Since my roots were pretty deeply grounded they could withstand the onslaught of the nature.
The same applies to your children too.*

Thursday, 30 March 2017

Love your  Parents..

Ek chhoti bacchi apne Papa ke saath ja rahi thi.

1 Pul par Paani bahut tezi se bah raha tha.

Papa : Beta daro mat,
Mera haath pakad lo.

Bacchi : Nahi Papa Aap Mera haath pakad lo.

Papa (Muskura kar bole) :
Dono me kya Antar hai?

Bacchi : Agar my  Aapka haath pakdu aur achanak kuch ho jaaye to shayad,
Me Aapka haath chod don.

LEKIN agar Aap Mera haath pakdenge to,
My janti hon ke chahe kuch bhi ho jaaye.

'AAP MERA HAATH KABHI NAHI CHHODENGE'

GREAT LOVE.

'Aaj bhi Bacche haath chhod dete hai,
Maa-Baap nahi'

Love your  Parents..
Dedicated to our 'PARENT'S'.

ಅನುಭವದಿಂದ* *ಕಲಿತ ಪಾಠಗಳು.

*ನಿನ್ನೆಯ ಸಿಟ್ಟನ್ನು ಇಂದು  ನೆನೆದರೆ ನಮ್ಮ ಬಗ್ಗೆ ನಮಗೇ ಬೇಸರ ಬರುತ್ತದೆ.*
*ಸಿಟ್ಟು ನಿನ್ನೆಯದಿರಲಿ,ಇಂದಿನದಿರಲಿ,ಅದು ತರುವುದು ಬೇಸರವನ್ನು ಮಾತ್ರ.ಮಂದಹಾಸದ ನಗುವಿರಲಿ ಪ್ರತಿ ಕ್ಜಣ.*

*ಕೊಲ್ಲಕ್ಕೆ ಅಂತ ಓಬ್ಬ ಇದ್ರೆ*
*ಕಾಪಾಡೊಕ್ಕೆ ಅಂತ ಮೇಲೊಬ್ಬ ಇರ್ತಾರೆ"*
*ಹಾಗೆ ನಮ್ ಕಂಡು ಸಹಿಸಿಕೊಳ್ಳದ*
*ಮೂರು ಜನ ಇದ್ರೆ*
*ನಮ್ಮ ಪ್ರೀತಿ ಮಾಡೋರು*
*ನೂರು ಜನ ಇರ್ತಾರೆ*

*ಕಳೆದುಕೊಂಡ ಜಾಗದಲ್ಲೇ ಹುಡಕಬೇಕು, ಅವಮಾನಿಸಿದ ಜಾಗದಲ್ಲೇ ಬೆಳೆಯಬೇಕು, ತಿರಸ್ಕರಿಸಿದವರಿಂದಲೇ ಪುರಸ್ಕರಿಸಿಕೊಳ್ಳಬೇಕು...*

*ಓದಿನಿಂದ ಕಲಿತ ಪಾಠಗಳು ಮರೆತರೂ ಮರೆಯಬಹುದು* *ಆದರೆ.*?
*ಜೀವನದಲ್ಲಿ ಅನುಭವದಿಂದ*
*ಕಲಿತ ಪಾಠಗಳು ಎಂದಿಗೂ ಮರೆಯಲು``ಸಾಧ್ಯವಿಲ್ಲ....*

*ಲೈಪಲ್ಲಿ ಸಮಸ್ಯೆಗಳು...

*ಲೈಪಲ್ಲಿ ಸಮಸ್ಯೆಗಳು ಮಳೆಯ ಹನಿಗಳಿದ್ದಂತೆ,ನಿಧಾನವಾಗಿ ಬರಲಿ,ರಭಸವಾಗಿ ಬರಲಿ ನಮ್ಮಲ್ಲಿ ಆತ್ಮವಿಶ್ವಾಸದ ‘ಕೊಡೆ‘ಇರಬೇಕಷ್ಟೆ.!*

ನೀವು ಕಣ್ಣಾರೆ ಕ೦ಡದ್ದನೆಲ್ಲಾ ಸತ್ಯ ಎ೦ದು ನ೦ಬಬೇಡಿರಿ ಏಕೆಂದರೆ ಒ೦ದೊಮ್ಮೆ ದೂರದಿ೦ದ ಕ೦ಡಾಗ ಉಪ್ಪು ಕೂಡ ಸಕ್ಕರೆಯ ಹಾಗೆ ಕಾಣುತ್ತದೆ

*ಸಣ್ಣ ಕಥೆ : ದೊಡ್ಡ ಅರ್ಥ*

*ಮೇಷ್ಟ್ರು ಇದ್ದಕ್ಕಿದ್ದಂತೆ ಪರೀಕ್ಷೆ ಇಟ್ಟು ಎಲ್ಲಾ ಮಕ್ಕಳಿಗೂ ಒಂದೊಂದು ಬಿಳಿಹಾಳೆಗಳನ್ನು* *ಕೊಟ್ಟರು. ಆ ಬಿಳಿ ಹಾಳೆಯಲ್ಲಿ ಏನು ಕಾಣಿಸುತ್ತದೆಯೋ ಅದೇ ವಿಷಯದ ಬಗ್ಗೆ ಬರೆಯುವಂತೆ ಹೇಳಿದರು. ಪ್ರತಿಯೊಬ್ಬರ* *ಹಾಳೆಯ ಮೇಲೂ ಒಂದೊಂದು ಸಣ್ಣ ಚುಕ್ಕೆ ಇತ್ತು. ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಆ ಚುಕ್ಕೆಯ ಬಗ್ಗೆ ತಮ್ಮ ತಮ್ಮ ಮನಸ್ಸಿಗೆ ಬಂದಂತೆ ಬರೆದರು.*
*ಪರೀಕ್ಷೆ ಮುಗಿದ ನಂತರ ಎಲ್ಲರ* *ಹಾಳೆಗಳನ್ನು ನೋಡಿದ* *ಮೇಷ್ಟ್ರು ಒಂದು ಪ್ರಶ್ನೆ ಕೇಳಿದರು.*
*ಹಾಳೆಯು ಸಂಪೂರ್ಣ ಸ್ವಚ್ಛ ಬಿಳಿ* *ಬಣ್ಣದಿಂದ ಕೂಡಿದ್ದರೂ ಆ ಸಣ್ಣ ಕಪ್ಪು ಚುಕ್ಕೆಯನ್ನೇ ಏಕೆ* *ಆರಿಸಿಕೊಂಡಿರಿ ? ಮಕ್ಕಳೆಲ್ಲಾ ಮೌನ* . . . .
*ಏಕೆಂದರೆ ಈ ಪ್ರಪಂಚವೇ ಹಾಗೆ*
*ನಿನ್ನಲ್ಲಿ ಎಷ್ಟೇ ಒಳ್ಳೆಯತನವಿದ್ದರೂ ಗುರುತಿಸುವುದಿಲ್ಲ. ಬದಲಾಗಿ* *ಒಂದು ಸಣ್ಣ ತಪ್ಪು ಹುಡುಕಿ ಅದಕ್ಕೆ ಬಣ್ಣ ಹಚ್ಚಿ ಬಿಂಬಿಸುತ್ತದೆ.*

*कामयाब' व्यक्ति की*

*कामयाब' व्यक्ति की*
*सिर्फ 'चमक' लोगों को*
*दिखाई देती है*
*उसने कितने 'अंधेरे' देखे हैं,*
*यह कोई नहीं जानता....*
*यदि सपने सच नहीं हो तो*
*रास्ते बदलो.... सिद्धान्त नहीं*
*क्योंकि*
*पेड़ हमेशा पत्तियाँ बदलते हैं....*
*जड़ें नहीं*

*ಜಗತ್ತು ಎಷ್ಟೇ ಬದಲಾಗಲಿ,*

*ಜಗತ್ತು ಎಷ್ಟೇ ಬದಲಾಗಲಿ,*
*ನಮ್ಮಭಾಂಧವ್ಯ ಚಿರಾಯುವಾಗಿರಲಿ,*
*ಬದುಕು ಎಷ್ಟೇ ಗೊಂದಲವಾಗಿರಲಿ,*
*ನಮ್ಮ ನ೦ಬಿಕೆ ಬಲಾಢ್ಯವಾಗಿರಲಿ,*
*ಕುಟುಂಬ ಎಷ್ಟೇ ದೊಡ್ಡದಾಗಲಿ,*
*ನಮ್ಮ ಗೆಳತನಕ್ಕೆಂದೂ ಧಕ್ಕೆಬಾರದಿರಲಿ,*
*ವಿಧಿಯಾಟ ಎಷ್ಟೇ ಜಠಿಲವಾಗಿರಲಿ,*
*ನಮ್ಮ ತನ ನಮ್ಮಲ್ಲಿರಲಿ.

ನಾವು ಸಂಪಾದಿಸಿದ

ನಾವು ಸಂಪಾದಿಸಿದ ಒಡವೆ, ವಸ್ತ್ರ ,ಕಾಂಚಾಣ, ಆಸ್ತಿ ,ಸಂಪತ್ತು ಇವೆಲ್ಲವಕ್ಕೂ ನಾವೇ ಕಾವಲುಗಾರರಾಗಿರಬೇಕು.
*ಆದರೆ ನಾವು ಸಂಪಾದಿಸಿದ,ಸ್ನೇಹ, ವಿದ್ಯೆ,* *ದಾನ ಧರ್ಮ ಮಾಡಿ ಸಂಪಾದಿಸಿದ ಪುಣ್ಯ ,ಇವೆಲ್ಲವು ನಮಗೆ ಕಾವಲಾಗಿರುತ್ತದೆ.*

Dedicated to all my friends.

Many years ago, after I got married I was sitting on a couch on a hot, humid day, sipping frozen juice during a visit to my father.
As I talked about adult life, marriage, responsibilities, and obligations, my father thoughtfully stirred the ice cubes in his glass and cast a clear, sober look at me.

"Never forget your friends," he advised, "they will become more important as you get older."

"Regardless of how much you love your family and the children you happen to have, you will always need friends. Remember to go out with them occasionally, do activities with them, call them ..."

"What strange advice!" I Thought. "I just entered the married world, I am an adult and surely my wife and the family that we will start will be everything I need to make sense of my life."

Yet I obeyed him; Kept in touch with my friends and annually increased their number. Over the years, I became aware that my father knew what he was talking about.

In as much as time and nature carry out their designs and mysteries on a man, friends were the bulwarks of his life.

After 50 years of life, here is what I learned:

Time passes.
Life goes on.
The distance separates.
Children grow up.
Children cease to be children and become independent. And to the parents it breaks the heart but the children are separated of the parents.
Jobs come and go.
Illusions, desires, attraction, sex ... weaken.
People do not do what they should do.
The heart breaks.
The parents die.
Colleagues forget the favors.
The races are over.
But, true friends are always there, no matter how long or how many miles they are.

A friend is never more distant than the reach of a need, barring you, intervening in your favor, waiting for you with open arms or blessing your life.

When we started this adventure called LIFE, we did not know of the incredible joys or sorrows that were ahead. We did not know how much we would need from each other. Love your parents, take care of your children, but keep a group of good friends. Dialogue with them but do not impose your criteria.

*जो बाहर की सुनता है*

*जो बाहर की सुनता है*
         *वो बिखर जाता है*
      *जो भीतर की सुनता है*
         *वो सँवर जाता है*
*ज़िन्दगी तस्वीर भी है और तकदीर भी*
*फर्क रंगों का है*
*मनचाहे रंगों से बने तो तस्वीर*
*और अनजाने रंगों से बने तो तकदीर।*
*माना दुनियाँ बुरी है ,सब जगह धोखा है,*
*लेकिन हम तो अच्छे बने ,हमें किसने रोका है !*

*स्वर्ग का सपना छोड़ दो*,

*स्वर्ग  का  सपना  छोड़  दो*,
    *नर्क   का   डर   छोड़   दो* ,
    *कौन   जाने   क्या   पाप ,*
              *क्या   पुण्य* ,
                   *बस............*
    *किसी   का   दिल   न   दुखे*
    *अपने   स्वार्थ   के   लिए* ,
               *बाकी   सब*
  *कुदरत   पर   छोड़   दो*

Tuesday, 28 March 2017

ಸಂತೋಷ ನಮ್ಮನ್ನು........

ಸಂತೋಷ ನಮ್ಮನ್ನು ಮಧುರವಾಗಿರಿಸುತ್ತದೆ.
ಪರೀಕ್ಷೆಗಳು ನಮ್ಮನ್ನು ಪ್ರಬಲರನ್ನಾಗಿಸುತ್ತದೆ.
ವೇದನೆಗಳು ನಮ್ಮನ್ನು ಮಾನವರನ್ನಾಗಿಸುತ್ತದೆ.
ವೈಫಲ್ಯಗಳು ನಮ್ಮನ್ನು ವಿನಯರನ್ನಾಗಿಸುತ್ತದೆ.
ನಂಬಿಕೆಗಳು ನಮ್ಮನ್ನು ಮುನ್ನೆಡೆಸುತ್ತಿರುತ್ತದೆ.

ಜಗತ್ತೆಂಬ ಈ ರಂಗಮಂಚದಲ್ಲಿ...

ಜಗತ್ತೆಂಬ ಈ ರಂಗಮಂಚದಲ್ಲಿ ಹೇಗೆ ಅಭಿನಯಿಸಬೇಕೆಂದರೆ ನಿಮ್ಮ ಪಾತ್ರ ಮುಗಿದ ನಂತರವೂ ಚಪ್ಪಾಳೆ ತಟ್ಟುತ್ತಿರಬೇಕು..
ಜಗತ್ತಿನ ಎಲ್ಲಾ ದ್ರವಗಳಲ್ಲಿ ಮಿಗಿಲಾದುದೆಂದರೆ ಕಣ್ಣೀರು..!! ಕಾರಣ ಅದರಲ್ಲಿ 1% ನೀರು ಹಾಗೂ 99% ಭಾವನೆ ಇರುತ್ತದೆ..!! ಆದುದರಿಂದ  ಯಾರ ಮನಸ್ಸನ್ನೂ ನೋಯಿಸಬೇಡಿ..ನಗುತ್ತಾ...ನಗಿಸುತ್ತಾ ಇರಿ...          

Monday, 27 March 2017

ಅದ್ಭುತವಾದ ಈ ಪ್ರೇರಣಾ ಸಾಲನ್ನು ಓದಿ..

🏻 ಒಂದು ಕಲ್ಲು ಕೇವಲ ಒಮ್ಮೆ ಮಂದಿರಕ್ಕೆ ಹೋಗುತ್ತದೆ. ನಂತರ ಸ್ವತಃ ದೇವರಾಗಿ ಬಿಡುತ್ತದೆ! ಅದೇ ಮಾನವರು ಪ್ರತಿದಿನ ಮಂದಿರಕ್ಕೆ ಹೋಗುತ್ತಾರೆ. ಆದರೂ ಕಲ್ಲಾಗಿಯೇ ಇರುತ್ತಾರೆ!
🏻 ಒಬ್ಬಳು ಮಾತೆ ತನ್ನ ಮಗುವನ್ನು ಹೊತ್ತು ಹೆತ್ತು ಬೆಳೆಸುವಲ್ಲಿ ತನ್ನ ದೇಹದ ಸೌಂದರ್ಯವನ್ನು ತ್ಯಜಿಸುತ್ತಾಳೆ. ಅದೇ ಮಗ ದೊಡ್ಡವನಾಗಿ ಒಬ್ಬಳು ಸುಂದರಿಗಾಗಿ ತನ್ನ ತಾಯಿಯನ್ನೇ ತ್ಯಜಿಸುತ್ತಾನೆ!
ನಿಧಾನವಾಗಿ ಅರ್ಥೈಸಿ ಓದಿ ಈ ಸಾಲುಗಳನ್ನು...
ತರಗತಿಯಲ್ಲಿ ಶಿಕ್ಷಕರು ಕೇಳುತ್ತಾರೆ
ಹಳ್ಳಿಗಳಿಗೆ ಮತ್ತು ನಗರಗಳಿಗೆ ಇರುವ ವ್ಯತ್ಯಾಸಗಳೇನು
ಒಬ್ಬ ಬಾಲಕ ಬಹಳ ಮಾರ್ಮಿಕವಾಗಿ ಉತ್ತರಿಸುತ್ತಾನೆ.
ಕೇವಲ ಇಷ್ಟೇ ವ್ಯತ್ಯಾಸ...
ಹಳ್ಳಿಗಳಲ್ಲಿ ಗೋವುಗಳನ್ನು ಸಾಕಲಾಗುತ್ತದೆ ಮತ್ತು ನಾಯಿಗಳು ಅಲೆಯುತ್ತವೆ....
ನಗರಗಳಲ್ಲಿ ನಾಯಿಗಳನ್ನು ಸಾಕಲಾಗುತ್ತದೆ ಮತ್ತು ಗೋವುಗಳು ಅಲೆಯುತ್ತವೆ...
ಜೀವನದ ಕಟು ಸತ್ಯ...
ಅನಾಥಾಶ್ರಮದಲ್ಲಿ ಅತ್ಯಂತ ಬಡವರ ಮಕ್ಕಳು ಕಾಣ ಸಿಗುತ್ತಾರೆ ಮತ್ತು ವೃದ್ಧಶ್ರಾಮದಲ್ಲಿ ಅತ್ಯಂತ ಶ್ರೀಮಂತ ಮಕ್ಕಳ ಹೆತ್ತವರು ಕಾಣ ಸಿಗುತ್ತಾರೆ..

Life is not qualified

Life is not qualified by fluent English,
branded Clothes or a Rich Lifestyle. !

It is measured by the number of faces,
who smile when they hear your Name.!!


Never stop loving people in life,
Because what you give is what you get,
Feel blessed because you have everything,
So, stop running behind anything,
And thank the Lord,


"Disappointments are natural life occurrences. Their lifespan depends on how long they dominate your thoughts. The shorter....the better your life will be"

The school principal in Singapore

The school principal in Singapore sent this letter to the parents before the exams..... and yes !!! You are going to love reading & sharing THIS one !!!

Dear parents,

The exams of your children will start soon. I know you are all really anxious for your child to do well.

But please do
remember amongst the
students who will be
sitting for the exams...

There is an artist,
who doesn't need to
understand maths...

There is an entrepreneur,
who doesn't care about
History or English literature...

There is a musician,
whose chemistry
marks won't matter...

There is an athlete,
whose physical fitness
is more important than physics...

If your child does get top
mark's, that's Great...!
But if he or she doesn't...

Please don't take away
their self-confidence
and dignity from them...

Tell them it's Okay...
It's just an exam, they
are cut out for much
bigger things in life...

Please do this and
when you do,
watch your children
conquer the world...

One exam or low marks
won't take away their
dreams and talent...

And please do not think
Doctors and Engineers
are the only happy
people in the World...

With Warm Regards,
The Principal

ಇರುವುದೊಂದೇ ಜೀವನ

ಇರುವುದೊಂದೇ ಜೀವನ ಸಿಗುವುದು ಕೆಲವೇ ದಿನ ತಿಳಿಯದೇ ಕಳೆವ ಬಾಲ್ಯ ಗೊತ್ತಿಲ್ಲದೆ ಜಾರುವ ಹರಯ ಕರೆಯದೆ ಬರುವ ಮುದಿತನ ಎಲ್ಲವನ್ನು ಅನುಭವಿಸುತ್ತಾ.. ಬಾಳುವುದೇ ಬದುಕು.

ದುಃಖದಲ್ಲಿರುವಾಗ...........

ದುಃಖದಲ್ಲಿರುವಾಗ ಯಾವುದೇ
      ನಿರ್ಧಾರ ತಗೋಬಾರದು.
ಖುಷಿಯಲ್ಲಿದ್ದಾಗ ಯಾವುದೇ
     ಪ್ರಮಾಣ ಮಾಡಬಾರದು.
ಕೋಪದಲ್ಲಿರುವಾಗ ದುಡುಕಿ
      ಮಾತಾಡ ಬಾರದು.
ಇದು ನಮ್ಮ ಉತ್ತಮ ಜೀವನದ ಗುಟ್ಟು

“Whatever You Give To Life, Life Gives You Back”

A successful business man was growing old and knew it was time to choose a successor to take over the business.

Instead of choosing one of his Directors or his children, he decided to do something different. He called all the young executives in his company together.

He said, “It is time for me to step down and choose the next CEO. I have decided to choose one of you..”

The young executives were Shocked, but the boss continued. “I am going to give each one of you a SEED today – one very special SEED… I want you to plant the seed, water it, and come back here one year from today with what you have grown from the seed I have given you. I will then judge the plants that you bring, and the one I choose will be the next CEO.”

One man, named Jim, was there that day and he, like the others, received a seed. He went home and excitedly, told his wife the story. She helped him get a pot, soil and compost and he planted the seed. Everyday, he would water it and watch to see if it had grown. After about three weeks, some of the other executives began to talk about their seeds and the plants that were beginning to grow.

Jim kept checking his seed, but nothing ever grew.

Three weeks, four weeks, five weeks went by, still nothing.

By now, others were talking about their plants, but Jim didn’t have a plant and he felt like a failure.

Six months went by — still nothing in Jim’s pot. He just knew he had killed his seed. Everyone else had trees and tall plants, but he had nothing. Jim didn’t say anything to his colleagues, however.

He just kept watering and fertilizing the soil – He so wanted the seed to grow.

A year finally went by and all the young executives of the company brought their plants to the CEO for inspection.

Jim told his wife that he wasn’t going to take an empty pot. But she asked him to be honest about what happened. Jim felt sick to his stomach, it was going to be the most embarrassing moment of his life, but he knew his wife was right. He took his empty pot to the board room. When Jim arrived, he was amazed at the variety of plants grown by the other executives. They were beautiful — in all shapes and sizes. Jim put his empty pot on the floor and many of his colleagues laughed, a few felt sorry for him!

When the CEO arrived, he surveyed the room and greeted his young executives.

Jim just tried to hide in the back. “My, what great plants, trees, and flowers you have grown,” said the CEO. “Today one of you will be appointed the next CEO!”

All of a sudden, the CEO spotted Jim at the back of the room with his empty pot. He ordered the Financial Director to bring him to the front. Jim was terrified. He thought, “The CEO knows I’m a failure! Maybe he will have me fired!”

When Jim got to the front, the CEO asked him what had happened to his seed – Jim told him the story.

The CEO asked everyone to sit down except Jim. He looked at Jim, and then announced to the young executives, “Behold your next Chief Executive Officer!

His name is Jim!” Jim couldn’t believe it. Jim couldn’t even grow his seed.

“How could he be the new CEO?” the others said.

Then the CEO said, “One year ago today, I gave everyone in this room a seed. I told you to take the seed, plant it, water it, and bring it back to me today. But I gave you all boiled seeds; they were dead – it was not possible for them to grow.

All of you, except Jim, have brought me trees and plants and flowers. When you found that the seed would not grow, you substituted another seed for the one I gave you. Jim was the only one with the courage and honesty to bring me a pot with my seed in it. Therefore, he is the one who will be the new Chief Executive Officer!”

* If you plant honesty, you will reap trust
* If you plant goodness, you will reap friends
* If you plant humility, you will reap greatness
* If you plant perseverance, you will reap contentment
* If you plant consideration, you will reap perspective
* If you plant hard work, you will reap success
* If you plant forgiveness, you will reap reconciliation
* If you plant faith in God, you will reap a harvest

So, be careful what you plant now; it will determine what you will reap later.

“Whatever You Give To Life, Life Gives You Back”

Don't know who wrote this.. Hats off to him

 Man O Man!
 When without money,
 eats vegetables at home;
 When has money,
 eats the same vegetables in a fine restaurant.

 When without money, rides bicycle;
 When has money rides the same ‘exercise machine’.

When without money walks to earn food
 When has money, walks to burn fat;

 Man O Man! Never fails to deceive thyself!

 When without money,
 wishes to get married;
 When has money,
 wishes to get divorced.

 When without money,
 wife becomes secretary;
 When has money,
 secretary becomes wife.

 When without money, acts like a rich man;
 When has money acts like a poor man.
 Man O Man! Never can tell the simple truth!

Says share market is bad,
 but keeps speculating;
 Says money is evil,
 but keeps accumulating.

 Says high Positions are lonely,
 but keeps wanting them.

 Says gambling & drinking is bad,
 but keeps indulging;

 Man O Man! Never means what he says and never says what he means..


Life is not about what
you couldn't do so far,
it's about what you can
still do.
Wait n dont ever give up..
Miracles happen every
day....
                             
Rs.20 seems too much
to give a beggar but it
seems okay when its
given as tip at a fancy
restaurant.

After a whole day of
work, Hours at the gym
seem alright but helping
your Mother out at home
seems like a burden.

Praying to god for 3 min
takes too much time but
watching a movie for 3
hours doesn't.


Wait a whole year for
Valentine's day but we
always forget Mother's
day.

Two poor starving kids
sitting on the pavement
weren't given even a slice
of Bread but a painting of
them sold for lakhs of
Rupees.

We don't think twice
About forwarding jokes
But we will rethink about
sending this message on.

Think about It..
Make a change. Coz u can ....
Six Easy ways to earn, even after death.

1) Give a smile or gift to someone.
Each time u gift or smile, it will make someone's day.....u gain.

2) Donate a wheelchair to a hospital. Each time sick person uses it, u gain.

3) Participate in building an orphanage, hospital, school or college.
Anybody uses it, u gain.

4) Place a water cooler in a public place. Anybody drinks water, u gain.

5) Plant a tree. Whenever a person, animal sits in its shade or eats from it, u gain.

6) And the easiest of all is to Share this message with people. Even if 1 applies any of the above, u gain.

"ನಾನು ಮಾಡಬಲ್ಲೆ, ನಾನು ಗೆಲ್ಲಬಲ್ಲೆ,

"ನಾನು ಮಾಡಬಲ್ಲೆ, ನಾನು ಗೆಲ್ಲಬಲ್ಲೆ, ನಾನು ದುಡಿಯಬಲ್ಲೆ, ನಾನು ಬದುಕಬಲ್ಲೆ ಎಂಬ ನಂಬಿಕೆಯಿದ್ದರೆ ನಮ್ಮನ್ನು ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ.ನಮ್ಮನ್ನು ಬೇರೆಯವರು ಸೋಲಿಸುವುದಿಲ್ಲ. ನಮ್ಮ ಸಾಮರ್ಥ್ಯದ ಬಗೆಗಿನ ಆತ್ಮವಿಶ್ವಾಸದ ಕೊರತೆಯಿಂದ ನಾವೇ ಸೋತಿರುತ್ತೇವೆ 

Saturday, 25 March 2017

ಸಾಹಸದಿಂದ ಹಿಡಿದ ಕೆಲಸ ಮುಂದುವರೆಸು .‌‌‌

ಸಾಹಸದಿಂದ ಹಿಡಿದ ಕೆಲಸ ಮುಂದುವರೆಸು .‌‌‌ ಒಂದು ದಿನ‌‌‌‌‌‌‌‌‌‌‌ ಅಥವಾ ಅಲ್ಪ ಸಮಯದಲ್ಲೇ ಜಯಗಳಿಸುವೆನೆಂದು ನಿರೀಕ್ಷಿಸಬೇಡ . ಯಾವಾಗಲೂ ಅತ್ಯುನ್ನತವಾದ ಆದರ್ಶವನ್ನೇ ಆಶ್ರಯಿಸು . ಸ್ಥಿರವಾಗಿರು . ಅಸೂಯೆ,ಸ್ವಾರ್ಥವನ್ನು ತೊರೆ. ನಿನ್ನ ದೇಶಕ್ಕೆ ಮತ್ತು ಮಾನವತೆಗೆ ನಿರಂತರವಾಗಿ ವಿಧೇಯನಾಗಿರು ಮತ್ತು ಸತ್ಯ ನಿಷ್ಠೆಯವನಾಗಿರು .ನೀನು ಜಗತ್ತನ್ನೇ ಅಲ್ಲಾಡಿಸಲು ಸಮರ್ಥನಾಗುವೆ

- ಸ್ವಾಮಿ ವಿವೇಕಾನಂದ

💧ನೀರಿನ ಹನಿ ಸರೋವರದಲ್ಲಿ
     ಇದ್ದರೆ ಯಾರೂ ಗುರುತಿಸಲ್ಲ...!
      ಅದೇ ಹನಿಯೂ ಒಂದು
      ಎಲೆಯ ಮೇಲಿದ್ದರೆ
⚪ ವಜ್ರದ ಹರಳಿನಂತೆ
                           ಹೊಳೆಯುತ್ತದೆ..
ಹಾಗಾಗಿ ನೀವು ಎಲ್ಲಿ ಹೊಳೆಯುತ್ತೀರೋ ಅಂತಹ
          ಜಾಗದಲ್ಲಿರಲು ಪ್ರಯತ್ನಿಸಿ...!

ಸಾಧನೆ ಇಲ್ಲದೆ ಗೆಲುವೆ ಇಲ್ಲ *ಸಾಧಿಸಿದವನಿಗೆ ಸಾವೇ ಇಲ್ಲ

"ಕಾಲಿನ ಮೇಲೆ ಕಾಲು ಹಾಕಿ ಕೂರುವುದಲ್ಲ ದೊಡ್ಡಸ್ತಿಕೆ,ತನ್ನ ಕಾಲ ಮೇಲೆ ನಿಂತು ಬೇರೆಯವರ ಕೈ ಹಿಡಿದು ಅವರಿಗೂ ನಿಲ್ಲಲು ಕಲಿಸುವುದು ನಿಜವಾದ ದೊಡ್ಡಸ್ತಿಕೆ..,"

ಮನಸ್ಸಲ್ಲಿ ಇರೋ ಅಹಂಕಾರ ಕಣ್ಣಿನಲ್ಲಿ ಬಿದ್ದು ಧೂಳಿನಂತೆ.ಅದನ್ನು ಸ್ವಚ್ಛ ಗೊಳಿಸದಿದ್ದರೆ ನಾವು ನೋಡುವ ಪ್ರತಿ ಒಂದು ವಸ್ತು ಕೂಡ ಅಶುದ್ಧವಾಗಿ ಕಾಣಿಸುತ್ತದೆ..."

ಮನುಷ್ಯ ಎಷ್ಟೇ ಕೆಂಪಗಿದ್ದರೂ ಅವನ ನೆರಳು ಕಪ್ಪಗೆ ಇರುತ್ತದೆ.
ನಾನು ಶ್ರೇಷ್ಟ ಅನ್ನುವುದು ಆತ್ಮವಿಶ್ವಾಸ
ನಾನೇ ಶ್ರೇಷ್ಟ ಎನ್ನುವುದು ಅಹಂಕಾರ

" ತಾವರೆ ಕೆಸರಲ್ಲಿ ಹುಟ್ಟಿದರೂ ಭಕ್ತರು ದೇವರ ಪಾದಕ್ಕೆ ಅರ್ಪಿಸುತ್ತಾರೆ, ಪಾಪಾಸುಕಳ್ಳಿ ಹೂ ಬೆಟ್ಟದ ಮೇಲೆ ಸ್ವಚ್ಛ ಜಾಗದಲ್ಲಿ ಹುಟ್ಟಿದರೂ ಅದರ ಉಪಯೋಗವಿಲ್ಲ........,
" ಇದರ ಅರ್ಥ ಹುಟ್ಟು ಮುಖ್ಯವಲ್ಲ ನಮ್ಮ ಬದುಕುವ ರೀತಿ ಮುಖ್ಯ.......

ಕಳೆದು ಕೊಂಡ ಜಾಗದಲ್ಲಿ ಹುಡಕಬೇಕು .   ಸೋತ ಜಾಗದಲ್ಲೆ ಗೆಲ್ಲಬೇಕು#ಅವಮಾನಿಸಿದ ಜಾಗದಲ್ಲೆ ಬೆಳೆಯಬೇಕು#ತಿರಸ್ಕರಿಸಿದವರಿಂದಲೇ ಪುರಸ್ಕರಿಸಿ ಕೊಳ್ಳಬೇಕು#

ಯಾರು "ಜವಾಬ್ದಾರಿ" ತೆಗೆದುಕೊಳ್ಳಲು ತಯಾರಾಗಿರುತ್ತಾರೋ, ಅವರಿಗೆ ಮಾತ್ರ "ತೊಂದರೆಗಳು " ಬರುತ್ತವೆ.
ಹಾಗೆಯೇ ಜವಾಬ್ದಾರಿ ತೆಗೆದುಕೊಂಡವರು ಯಾವಾಗಲೂ ಸೋಲುವದಿಲ್ಲ " ಗೆಲ್ಲುತ್ತಾರೆ " ಮತ್ತು ಹೊಸದನ್ನು "ಕಲಿಯುತ್ತಾರೆ".

"ತಿರಸ್ಕಾರದಿಂದ ಕಾಣುವ ಗೆಳೆಯರಿಗೋಸ್ಕರ ಅಳುತ್ತಾ ಕುಳಿತುಕೊಳ್ಳಬೇಡಿ.. ಬದಲಾಗಿ ನಗುತ್ತ ಅವರಿಗೊಂದು ಥ್ಯಾಂಕ್ಸ್ ಹೇಳಿ ಏಕೆಂದರೆ ಅವರಿಗಿಂತ ಉತ್ತಮ ಗೆಳೆಯರ ಹುಡುಕಾಟಕ್ಕೆ ಅವಕಾಶ ನೀಡಿದ್ದಕ್ಕಾಗಿ"...!

ಈ ಜಗತ್ತಿನಲ್ಲಿ ಆಸ್ತಿವಂತರು ಬಹಳಷ್ಟು
ಜನರಿದ್ದಾರೆ ಆಸ್ತಿವಂತರ ಹಿಂದೆ ಹೋಗದೇ
  ಹೃದಯವಂತರ ಹಿಂದೆ ಹೋಗೋಣ
ಯಾಕೆಂದರೆ.......! ಆಸ್ತಿಗೆ ಬೆಲೆಕಟ್ಟಬಹುದು ಆದರೆ ಪ್ರೀತಿಸುವ ಹೃದಯಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ
                                                       
" "ಕಳೆದು ಹೋದ ಜೀವನವನ್ನು ಯಾವತ್ತೂ ನೆನಪಿಸಬೇಡಿ.ಹಣೆ ಬರಹದಲ್ಲಿ ಏನು ಬರೆದಿದೆಯೊ ಅದು ಆಗಲೆಬೇಕು.ನಿನ್ನೆಯ ನೋವು ನೆನಪು ಮಾಡಿದ್ರೆ ಇಂದಿನ ಅಮೂಲ್ಯವಾದ ದಿನದ ನಗು ಹಾಳು ಮಾಡುತ್ತೇ...."

"🎯 ಗುರಿ ಮುಟ್ಟವ ನಿರ್ಧಾರಿಸಿರುವ ಮನಸ್ಸನ್ನು.ಇಳಿಜಾರಿನಲ್ಲಿ ಹರಿಯುವ ನೀರನ್ನು ಯಾರು ತಾನೇ ತಡೆಯಲು ಸಾಧ್ಯ...?

"ಒಬ್ಬರಿಗೆ ನೋವು ಮಾಡುವುದೆಂದರೆ ಮರವನ್ನು ಕಡಿದು ಉರುಳಿಸಿದಂತೆ- ಕೆಲವೇ ನಿಮಿಷಗಳ ಕೆಲಸ....
     "ಒಬ್ಬರನ್ನು ಸಂತೋಷ ಪಡಿಸುವುದೆಂದರೆ ಗಿಡವನ್ನು ನೆಟ್ಟು,ಮರವಾಗಿ ಬೆಳೆಸಿದಂತೆ- ತುಂಬಾ ಸಮಯ, ಪ್ರೀತಿ, ತಾಳ್ಮೆ, ಕಾಳಜಿಯ ಅಗತ್ಯವಿರುತ್ತದೆ....

 ನಾವು ಒಬ್ಬರಿಗೆ ಸಹಾಯ
 ಮಾಡಿದರೆ ನಮಗೆ ದೇವರು
  ಸಹಾಯ ಮಾಡುತ್ತಾರೆ.ನಾವು
     ಸಮಾಜವನ್ನು ಬೆಳೆಸಿದರೆ
         ಸಮಾಜ ನಮ್ಮನ್ನು
              ಬೆಳೆಸುತ್ತದೆ.

 ಸಂಬಂಧವೆನ್ನುವುದು ಬಡವ ಬಲ್ಲಿದ ಲೆಕ್ಕಾಚಾರದ ಮೇಲಿರಬಾರದು.. ಕುಡಿಯಲು ಯೋಗ್ಯವಿಲ್ಲದ ನೀರು ಕೂಡ ಬೆಂಕಿಯನ್ನು ನಂದಿಸುತ್ತದೆ...

ಅರ್ಥಪೂರ್ಣ ;- "ಮನುಜ,
ಬೆಂಕಿ‌ ತಾ ಹುಟ್ಟಿದ ಸ್ಥಳವನ್ನೆ ತಾ ಸುಡುವಂತೆ ,,
ನಿನ್ನ ‌ಅಹಂಕಾರ ನಿನ್ನನ್ನೆ ನಾಶ ಮಾಡುತ್ತದೆ ..."

ವಿಚಿತ್ರ ಜಗತ್ತಿನಲ್ಲಿ ಬದುಕ್ತಿರೊದೆ ಗ್ರೇಟು.., ಅಂತದ್ರಲ್ಲಿ ನಾಲ್ಕು ಜನ ನಮ್ಮನ್ನು  ನೋಡಿ ಏನಂತಾರೆ ಅಂತ ಯೋಚನೆ ಮಾಡ್ಕೋಂಡು ಕುಂತಿದ್ರೆ....!
 ವ
ಅದೇ ನಾಲ್ಕು ಜನ ಕೊನೆಗೆ ಹೇಳ್ತಾರೆ ಬೇಗ ಎತ್ತಿ ಟೈಮ್ ಆಗುತ್ತೆ ಅಂತ.

'ಸಾವು' ಬೆನ್ನಿಂದೆ ಇರೋದು ವಾಡಿಕೆ
'ಸಾಧನೆ' ಕಣ್ಮುಂದೆ ಬರ್ಬೆಕು ಅನ್ನೋದೇ ಬೇಡಿಕೆ...

ಸಾಧನೆ ಇಲ್ಲದೆ ಗೆಲುವೆ ಇಲ್ಲ *ಸಾಧಿಸಿದವನಿಗೆ ಸಾವೇ ಇಲ್ಲ

✨✨ಶ್ರೇಷ್ಟ✨✨

👤ಮನುಷ್ಯ ಎಷ್ಟೇ ಕೆಂಪಗಿದ್ದರೂ
     ಅವನ ನೆರಳು ಕಪ್ಪಗೆ ಇರುತ್ತದೆ.
🌿ನಾನು ಶ್ರೇಷ್ಟ ಅನ್ನುವುದು
           ಆತ್ಮವಿಶ್ವಾಸ🌸
🍂ನಾನೇ ಶ್ರೇಷ್ಟ ಎನ್ನುವುದು
            ಅಹಂಕಾರ🔅

" ತಾವರೆ ಕೆಸರಲ್ಲಿ ಹುಟ್ಟಿದರೂ ಭಕ್ತರು ದೇವರ ಪಾದಕ್ಕೆ ಅರ್ಪಿಸುತ್ತಾರೆ, ಪಾಪಾಸುಕಳ್ಳಿ ಹೂ ಬೆಟ್ಟದ ಮೇಲೆ ಸ್ವಚ್ಛ ಜಾಗದಲ್ಲಿ ಹುಟ್ಟಿದರೂ ಅದರ ಉಪಯೋಗವಿಲ್ಲ........,
" ಇದರ ಅರ್ಥ ಹುಟ್ಟು ಮುಖ್ಯವಲ್ಲ ನಮ್ಮ ಬದುಕುವ ರೀತಿ ಮುಖ್ಯ.......

ಒಂದು ಹಳ್ಳಿಯಲ್ಲಿ ಒಬ್ಬ ಹಾಲು ಮಾರುವ ಕಸಬನ್ನು ಮಾಡುತಿದ್ದ

ಒಂದು ಹಳ್ಳಿಯಲ್ಲಿ ಒಬ್ಬ ಹಾಲು ಮಾರುವ ಕಸಬನ್ನು ಮಾಡುತಿದ್ದ, ಹಾಲು,ಮೊಸರು ಮತ್ತು ತುಪ್ಪವನ್ನು ಮಾರಾಟ
ಮಾಡಿ ತನ್ನ ಪತ್ನಿಯೊಂದಿಗೆ ಜೀವನ ನಡೆಸುತ್ತಿದ್ದ.

ಸ್ವಲ್ಪ ಹಾಲನ್ನು ಊರಿನಲ್ಲೇ ಮಾರಿ ಇನ್ನು ಸ್ವಲ್ಪ ಹಾಲಿನಿಂದ ತುಪ್ಪ ಮಾಡಿ ವಾರಕ್ಕೆ ಒಮ್ಮೆ ಮಾರ್ಕೆಟ್ ಗೆ ಹೋಗಿ ಮಾರುತ್ತಿದ್ದ.

ಹೆಂಡತಿ ತುಪ್ಪವನ್ನು ಒಂದು ಪ್ಲಾಸ್ಟಿಕ್ ನಲ್ಲಿ ಹಾಕಿ ಓಂದು, ಓಂದು kg ಬ್ಯಾಗ್ ಗಳಾಗಿ ಮಾಡಿ ಕೊಡುತ್ತಿದ್ದಳು.

ಒಂದು ದಿನ ಮಾರ್ಕೆಟ್ ಗೆ ಹೋಗಿ ದಿನನಿತ್ಯ ಮಾರುವ ಅಂಗಡಿಯವನಿಗೆ ಕೊಟ್ಟು ತನಗೆ ಬೇಕಾದ ಉಪ್ಪು,ಸಕ್ಕರೆ,ಅಕ್ಕಿ ಮತ್ತು ಇತ್ಯಾದಿ ಸಾಮಗ್ರಿಯನ್ನು ಕೊಂಡು ಮನೆಗೆ ಹೊರಟ. ಆಗ ಅಂಗಡಿ ಮಾಲೀಕನು ತುಪ್ಪವನ್ನು ಎತ್ತಿಡುವಾಗ ಹೀಗೆ ಒಂದು ಬ್ಯಾಗ್ ಅನ್ನು ತೂಕ ಮಾಡಿ ನೋಡುವ ಅಂದುಕೊಂಡು ತೂಕ ಮಾಡಿದಾಗ ಅವನಿಗೆ ಆಶ್ಚರ್ಯವಾಯಿತು ಅದು 1kg ಅಲ್ಲ ಕೇವಲ 900gm ಇತ್ತು. ಮಾಲೀಕನು ಎಲ್ಲಾ ತೂಕ ಮಾಡಿದಾಗ ಅವನಿಗೆ ಎಲ್ಲಾ ಬ್ಯಾಗುಗಳು 900gm ಸಿಕ್ಕಿತು.ಮಾಲೀಕನಿಗೆ
ಮನಸ್ಸಿಗೆ ತುಂಬ ನೋವಾಯಿತು.
 ಇವನ ಮೇಲೆ ಇಟ್ಟ ನಂಬಿಕೆಗೆ, ಇವನು ನನಗೆ ಮೋಸ ಮಾಡುತ್ತಾನೆ ಎಂದು.

ಮತ್ತೆ ಒಂದು ವಾರ ಕಳೆದ ನಂತರ ಆ ಹಾಲು ಮಾರುವವನು
ತುಪ್ಪವನ್ನು ಮಾರಲು ಬಂದ. ಆಗ ಮಾಗಲೀಕ ಹೇಳಿದ ನನ್ನ ಅಂಗಡಿಗೆ ಇನ್ನು ಮುಂದೆ ನೀನು ಕಾಲಿಡಬೇಡ,ನೀನೊಬ್ಬ ಮೊಸಗಾರ, ನಂಬಿಕೆ ದ್ರೋಹಿ. ತುಪ್ಪ 1kg ಎಂದು 900gm ಕೊಡುತಿಯ ಪುನ, ನಿನ್ನ ಜೊತೆ ನಾನು ವ್ಯವಹಾರ ಮಾಡಿದರೆ ನನಗೆ ಮೂರ್ಖ ಎನ್ನುವರು ಎಂದು ತುಂಬ ಗಲಾಟೆ ಮಾಡಿದ.
ಆಗ ಆ ಮುದುಕ ವಿನಮ್ರತೆಯಿಂದ ಹೇಳಿದ :
                           ಮಾಲೀಕರೇ ನಾನು ಬಡವ ಹೌದು ಆದರೆ ಮೊಸಗಾರನಲ್ಲ , ನನ್ನ ಹತ್ತಿರ ತಕ್ಕಡಿ ಕೊಳ್ಳುವಷ್ಟು ಹಣವು ಇಲ್ಲ, ನಿಮಿಂದ ಕೊಂಡ 1kg ಸಕ್ಕರೆಯನ್ನು ಆದಾರಿತವಾಗಿ ಮನೆಯಲ್ಲಿ ತಕ್ಕಡಿ ರೀತಿಯಲ್ಲಿ ಮಾಡಿ ಅದರಿಂದ ನಾನು ತೂಕವನ್ನು ಅಳೆಯುತ್ತೇನೆ ಎಂದ.

      ಪ್ರಿಯ ಗೆಳೆಯರೆ, ನಾವು ಬೇರೆಯವರಿಗೆ ಏನು ಕೊಡುತ್ತಿವೋ ಅದೇ ಮರಳಿ ನಮಗೆ ಬರುತ್ತೆ, ಅದು ಗೌರವ ಇರಲಿ, ದುಃಖ ಇರಲಿ ಅಥವಾ ಮೊಸನೆ ಆಗಿರಲಿ
ಏನಂತೀರಾ.